varthabharthiಅಂತಾರಾಷ್ಟ್ರೀಯ

ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆಗೆ ಟ್ರಂಪ್ ಕಿರಿಯ ಪುತ್ರಿ ಬೆಂಬಲ

ವಾರ್ತಾ ಭಾರತಿ : 4 Jun, 2020

ಹೊಸದಿಲ್ಲಿ: ಜಾರ್ಜ್ ಫ್ಲಾಯ್ಡ್ ಹತ್ಯೆ ಘಟನೆ ಖಂಡಿಸಿ ಅಮೆರಿಕದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಕಿರಿಯ ಪುತ್ರಿ ಟಿಫ್ಫನಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನೆಯನ್ನು ತಮ್ಮ ತಂದೆಗೆ ತಲುಪಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟಿಫ್ಫನಿ ಹಾಕಿರುವ ಪೋಸ್ಟ್ ಗೆ ಜನರು ಪ್ರತಿಕ್ರಿಯಿಸಿದ್ದಾರೆ.

ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಇಂದು ಸಾಮಾಜಿಕ ಜಾಲತಾಣದ ಜನರು ಕಪ್ಪು ಫೋಟೊವನ್ನು ಶೇರ್ ಮಾಡಿದ್ದು, ಟಿಫ್ಫನಿ ಕೂಡ ಇಂತಹ ಪೋಸ್ಟ್ ಶೇರ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)