ವಾಣಿಜ್ಯೋದ್ಯಮದ ಬಡ್ಡಿರಹಿತ ವಿದ್ಯುತ್ ಬಿಲ್ ಪಾವತಿ: ಜೂ.30ರವರೆಗೆ ಮುಂದೂಡಿಕೆ
ಮಂಗಳೂರು, ಜೂ.4: ವಾಣಿಜ್ಯೋದ್ಯಮದ ವಿದ್ಯುತ್ ಗ್ರಾಹಕರಿಗೆ ರಾಜ್ಯ ಸರಕಾರ ಪರಿಹಾರ ಪ್ರಕಟಿಸಿದ್ದು, ಎಪ್ರಿಲ್, ಮೇ ತಿಂಗಳ ವಿದ್ಯುತ್ ಬಿಲ್ನ ನಿಗದಿತ ಶುಲ್ಕವನ್ನು ಬಡ್ಡಿರಹಿತವಾಗಿ ಪಾವತಿಸುವುದನ್ನು ಜೂ.30ರವರೆಗೆ ಮುಂದೂಡಲಾಗಿದೆ.
ರಾಜ್ಯದ ಎಲ್ಲ ಖಾಸಗಿ ವಾಣಿಜ್ಯ ಉದ್ಯಮಿಗಳ ಸಣ್ಣ, ಮಧ್ಯಮ ಮತ್ತು ದೊಡ್ಡ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್ಗಳೆಂದು ಸಂಬಂಧಪಟ್ಟ ಅಧಿಕೃತ ಪ್ರಾಧಿಕಾರದಿಂದ ಗುರುತಿಸಲ್ಪಟ್ಟು ಹಾಗೂ ಉದ್ಯಮಗಳನ್ನು ರಾಜ್ಯದಲ್ಲಿ ನಡೆಸಲು ಆಧಾರವುಳ್ಳ ಪ್ರಮಾಣಪತ್ರ/ ಪರವಾನಿ ಹೊಂದಿರುವ ಎಲ್ಲ ವಿದ್ಯುತ್ ಗ್ರಾಹಕರಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಅಗತ್ಯವಿದ್ದಲ್ಲಿ ಸಂಬಂಧಿಸಿದ ಉಪವಿಭಾಗಾಧಿಕಾರಿ ಅಥವಾ ಮೆಸ್ಕಾಂ ಸಹಾಯವಾಣಿ 1912ನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story