ಹೆಂಡತಿ, ಮಕ್ಕಳನ್ನು ಎರಡು ದಿನಗಳಲ್ಲಿ ಬೆಂಗಳೂರಿಗೆ ಕರೆ ತನ್ನಿ: ಸಿಬ್ಬಂದಿಗೆ ಪೊಲೀಸ್ ಇಲಾಖೆ ಸೂಚನೆ
ಬೆಂಗಳೂರು, ಜೂ.4: ಕೋವಿಡ್-19 ಸಂಬಂಧ ಊರಿನಲ್ಲಿಯೇ ಉಳಿದುಕೊಂಡಿರುವ ಪತ್ನಿ, ಮಕ್ಕಳನ್ನು ಎರಡು ದಿನಗಳಲ್ಲಿ ಬೆಂಗಳೂರಿಗೆ ಕರೆ ತರಲು ಸೇರಿದಂತೆ ಇನ್ನಿತರೆ ಸೂಚನೆಗಳನ್ನು ಪೊಲೀಸ್ ಸಿಬ್ಬಂದಿಗೆ ನೀಡಿ, ಪ್ರಕಟನೆಯೊಂದನ್ನು ಪೊಲೀಸ್ ಇಲಾಖೆ ಹೊರಡಿಸಿದೆ.
ಮುಂದಿನ ನಾಲ್ಕು ತಿಂಗಳು ಕಾಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಹಾಗಾಗಿ, ಹೊರಗಡೆ ಉಳಿದುಕೊಂಡಿರುವ ತಮ್ಮ ಕುಟುಂಬ ಸದಸ್ಯರನ್ನು ಜೂ.7ರೊಳಗೆ ಕರೆ ತನ್ನಿ ಎಂದು ಸೂಚನೆ ನೀಡಲಾಗಿದೆ.
ಅದೇ ರೀತಿ, ಬೆಂಗಳೂರಿನಿಂದ ಹೊರಗಡೆ ಹೋಗುವ ಪೊಲೀಸ್ ಸಿಬ್ಬಂದಿ ಅಥವಾ ಕುಟುಂಬ ಸದಸ್ಯರು, ಕಡ್ಡಾಯವಾಗಿ 5 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಬಳಿಕ ತಮ್ಮ ಸ್ವಂತ ಖರ್ಚಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿ ನೆಗಟಿವ್ ವರದಿ ಬಂದರೆ ಮಾತ್ರ ಠಾಣೆಗೆ ಹಾಜರಾಗಬೇಕೆಂದು ಹೇಳಲಾಗಿದೆ.
Next Story