varthabharthiರಾಷ್ಟ್ರೀಯ

ದ್ವೇಷಕಾರುವ ಹೇಳಿಕೆ ನೀಡಿದ ವೈದ್ಯೆಯ ವಿರುದ್ಧ ಕ್ರಮ ಕೈಗೊಂಡ ಆದಿತ್ಯನಾಥ್ ಸರಕಾರ

ವಾರ್ತಾ ಭಾರತಿ : 4 Jun, 2020

ಹೊಸದಿಲ್ಲಿ: ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆ ನೀಡುವ ವಿಡಿಯೋ ವೈರಲ್ ಆದ ನಂತರ ಕಾನ್ಪುರದ ಗಣೇಶ್ ಶಂಕರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಡಾ.ಆರತಿ ಲಾಲ್ ಚಂದಾನಿ ವಿರುದ್ಧ ಉತ್ತರ ಪ್ರದೇಶ ಸರಕಾರವು ಕ್ರಮ ಕೈಗೊಂಡಿದೆ.

ದ್ವೇಷದ ವಿಡಿಯೋ ಹೇಳಿಕೆ ವೈರಲ್ ಆಗುತ್ತಲೇ ಈ ಬಗ್ಗೆ ಲಾಲ್ ಚಂದಾನಿ ಕ್ಷಮೆ ಯಾಚಿಸಿದ್ದರೂ ಅವರನ್ನು ಝಾನ್ಸಿಗೆ ವರ್ಗಾವಣೆ ಮಾಡುವ ಮೂಲಕ ಸರಕಾರ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.

ಲಾಲ್ ಚಂದಾನಿ ವಿವಾದಾತ್ಮಕ ಹೇಳಿಕೆಯ ಬಗ್ಗೆ ಕಾನ್ಪುರ ಜಿಲ್ಲಾಧಿಕಾರಿ ಡಾ. ಬ್ರಹ್ಮದಿಯೋ ರಾಮ್ ತಿವಾರಿ ವರದಿ ಸಲ್ಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಬಗ್ಗೆ ತನಗೆ ಯಾವುದೇ ಆದೇಶ ಪತ್ರ ತಲುಪಿಲ್ಲ ಎಂದು ಡಾ. ಆರತಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)