ಜಾರ್ಜ್ ಫ್ಲಾಯ್ಡ್ ಗೌರವಾರ್ಥ ಅಮೆರಿಕ ಅಧ್ಯಕ್ಷ ಟ್ರಂಪ್ ಮಾಡಿದ್ದ ವೀಡಿಯೊ ತೆಗೆದುಹಾಕಿದ ಟ್ವಿಟರ್
ವಾಷಿಂಗ್ಟನ್,ಜೂ.5: ಕಳೆದ ವಾರ ಮಿನಸೋಟ ರಾಜ್ಯದ ಮಿನಪೊಲಿಸ್ ನಗರದಲ್ಲಿ ಪೊಲೀಸರ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಆಫ್ರಿಕಾ ಮೂಲದ ಜಾರ್ಜ್ ಫ್ಲಾಯ್ಡ್ (46)ಎಂಬುವವರಿಗೆ ಗೌರವ ಸೂಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿಕೊಂಡಿದ್ದ ವೀಡಿಯೊವನ್ನು ಟ್ವಿಟರ್ ತೆಗೆದುಹಾಕಿದೆ.
3 ನಿಮಿಷ, 45 ಸೆಕೆಂಡ್ ಅವಧಿಯ ವೀಡಿಯೊವನ್ನು ಜೂನ್ 3ರಂದು ಟ್ರಂಪ್ ಹಂಚಿಕೊಂಡಿದ್ದರು. ಕಾಪಿರೈಟ್ ಸಮಸ್ಯೆಯಿಂದಾಗಿ ವೀಡಿಯೊವನ್ನು ಅಳಿಸಿಹಾಕಲಾಗಿದೆ ಎಂದು ತಿಳಿದುಬಂದಿದೆ.
ಫ್ಲಾಯ್ಡ್ ಹತ್ಯೆಯ ಬಳಿಕ ಮಿನಪೊಲಿಸ್ ನಗರದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಅದು ಅಮೆರಿಕದಾದ್ಯಂತ ವ್ಯಾಪಿಸಿತ್ತು. ಲಾಸ್ ಏಂಜಲೀಸ್, ಶಿಕಾಗೊ, ನ್ಯೂಯಾರ್ಕ್, ಹ್ಯೂಸ್ಟನ್, ಫಿಲಡೆಲ್ಫಿಯಾ ಹಾಗೂ ವಾಷಿಂಗ್ಟನ್ ಡಿಸಿ ನಗರದಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು.
Next Story