ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಲೂ ಹೇಸುವುದಿಲ್ಲ: ಟ್ವಿಟರ್
ಲಂಡನ್, ಜೂ. 5: ಜಾರ್ಜ್ ಫ್ಲಾಯ್ಡ್ ಸಾವಿನ ವಿರುದ್ಧ ನಡೆದ ಪ್ರತಿಭಟನೆಗಳ ಬಗ್ಗೆ ಹಾಕಿರುವಂತೆ, ಪ್ರಚೋದನಕಾರಿ ಸಂದೇಶಗಳನ್ನು ಹಾಕುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದರೆ ಅವರ ಖಾತೆಯನ್ನೇ ಸ್ಥಗಿತಗೊಳಿಸಲು ಹೇಸುವುದಿಲ್ಲ ಎಂಬ ಇಂಗಿತವನ್ನು ಟ್ವಿಟರ್ನ ಉನ್ನತ ಅಧಿಕಾರಿಯೊಬ್ಬರು ಗುರುವಾರ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರನ್ನು ದೂರವೇ ಇಟ್ಟಿರುವ ಟ್ರಂಪ್ ತನಗನಿಸಿದ್ದನ್ನು ಹೇಳಲು ಟ್ವಿಟರನ್ನೇ ಅವಲಂಬಿಸಿದ್ದಾರೆ. ಟ್ವಿಟರ್ನಲ್ಲಿ 8.17 ಕೋಟಿ ಅನುಯಾಯಿಗಳನ್ನು ಟ್ರಂಪ್ ಹೊಂದಿದ್ದು, ಅವರ @realDonaldTrump ಖಾತೆಯು ಟ್ವಿಟರ್ನ 10 ಪ್ರಸಿದ್ಧ ಖಾತೆಗಳ ಪೈಕಿ ಒಂದಾಗಿದೆ.
ಇತರ ಎಲ್ಲ ಸಾರ್ವಜನಿಕ ವ್ಯಕ್ತಿಗಳಿಗೆ ಅನ್ವಯಿಸುವ ಪರಿಶೀಲನಾ ಪ್ರಕ್ರಿಯೆಯನ್ನು ಟ್ರಂಪ್ ಟ್ವೀಟ್ಗಳಿಗೂ ಅನ್ವಯಿಸಲು ಟ್ವಿಟರ್ ನಿರ್ಧರಿಸಿದೆ ಎಂದು ಟ್ವಿಟರ್ನ ಸಾರ್ವಜನಿಕ ನೀತಿ ನಿರ್ದೇಶಕ ನಿಕ್ ಪಿಕ್ಲ್ಸ್ ಬ್ರಿಟನ್ ಸಂಸತ್ತಿನಲ್ಲಿ ಗುರುವಾರ ನಡೆದ ವಿಚಾರಣೆಯ ವೇಳೆ ಹೇಳಿದರು.
Next Story