varthabharthi


ಕ್ರೀಡೆ

ಮಾಜಿ ಸಂತೋಷ್ ಟ್ರೋಫಿ ಆಟಗಾರ ಹಂಝ ಕೋಯ ಕೊರೋನ ವೈರಸ್ ನಿಂದ ಮೃತ್ಯು

ವಾರ್ತಾ ಭಾರತಿ : 6 Jun, 2020

ಕೊಚ್ಚಿ: ಕೊರೋನ ಸೋಂಕಿನಿಂದ ಬಳಲುತ್ತಿದ್ದ, ಇತ್ತೀಚೆಗಷ್ಟೇ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾದ ಮಾಜಿ ಸಂತೋಷ್ ಟ್ರೋಫಿ ಆಟಗಾರ ಹಂಝ ಕೋಯ ಇಂದು ಮೃತಪಟ್ಟಿದ್ದಾರೆ.

ಮೂಲತಃ ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿಯವರಾದ ಹಂಝ ಕೋಯ ಮುಂಬೈಯಲ್ಲಿ ವಾಸಿಸುತ್ತಿದ್ದು, ಮೇ 21ರಂದು ಕೇರಳಕ್ಕೆ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಪಸಾಗಿದ್ದರು.

ಪತ್ನಿ ಮತ್ತು ಪುತ್ರ ಇಬ್ಬರಲ್ಲೂ ಕೊರೋನ ವೈರಸ್ ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳೂ ಕೂಡ ಕೊರೋನ ವೈರಸ್ ಸೋಂಕಿಗೊಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಜೂನ್ 5ರಂದು ಹಂಝರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ತಡರಾತ್ರಿ ಅವರು ಕೊನೆಯುಸಿರೆಳೆದರು.

1981ರಿಂದ 1986ರವರೆಗೆ ಹಂಝ ಕೋಯ ಸಂತೋಷ್ ಟ್ರೋಫಿ ಟೂರ್ನಿಗಳಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದು, ಎರಡು ಬಾರಿ ಭಾರತೀಯ ಸಾಕರ್ ಕ್ಯಾಂಪ್ ಗೆ ಆಯ್ಕೆಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)