varthabharthi


ಅಂತಾರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಡೆಮಾಕ್ರಟಿಕ್ ಅಭ್ಯರ್ಥಿ: ಅಧಿಕೃತ ಘೋಷಣೆ

ವಾರ್ತಾ ಭಾರತಿ : 6 Jun, 2020

ವಾಶಿಂಗ್ಟನ್, ಜೂ. 6: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧಿಸಲು ಡೆಮಾಕ್ರಟಿಕ್ ಪಕ್ಷವು ಮಾಜಿ ಉಪಾಧ್ಯಕ್ಷ ಜೋ ಬೈಡನ್‌ರನ್ನು ಅಧಿಕೃತವಾಗಿ ನೇಮಿಸಿದೆ.

77 ವರ್ಷದ ಜೋ ಬೈಡನ್‌ರ ಪ್ರತಿನಿಧಿ ಮತಗಳ ಸಂಖ್ಯೆ ಶುಕ್ರವಾರ ರಾತ್ರಿ ಅರ್ಧವನ್ನು ದಾಟಿದೆ. ಒಟ್ಟು 3,979 ಮತಗಳ ಪೈಕಿ ಅವರು 1,991 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಅರ್ಹತೆಯನ್ನು ಗಳಿಸಿದ್ದಾರೆ.

ಅವರು ಬರಾಕ್ ಒಬಾಮರ ಅಧ್ಯಕ್ಷಾವಧಿಯಲ್ಲಿ 2009ರಿಂದ 2017ರವರೆಗೆ ಅಮೆರಿಕದ 47ನೇ ಉಪಾಧ್ಯಕ್ಷರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)