varthabharthi


ಕರಾವಳಿ

ಬೆಳುವಾಯಿ: ಮುಂಡ್ರೊಟ್ಟು ಜ್ಞಾನವಿಕಾಸ ಕೇಂದ್ರದ ಸಭೆಯಲ್ಲಿ ಪರಿಸರ ಜಾಗೃತಿ

ವಾರ್ತಾ ಭಾರತಿ : 6 Jun, 2020

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಮೂಡುಬಿದಿರೆ ತಾಲೂಕು ಇದರ ವತಿಯಿಂದ  ಬೆಳುವಾಯಿ ವಲಯದ ಮುಂಡ್ರೊಟ್ಟು ಜ್ಞಾನವಿಕಾಸ ಕೇಂದ್ರದ ಸಭೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. 

ಬೆಳುವಾಯಿ ಗ್ರಾ.ಪಂನ ಸದಸ್ಯೆ ಅನಿತಾ ಪರಿಸರ ಸಂರಕ್ಷಣೆ ಹಾಗೂ ನಾಟಿ ಮಾಡಿದ ಗಿಡಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.  ಒಕ್ಕೂಟದ ಪದಾಧಿಕಾರಿ ರೇಣುಕಾ, ಜ್ಞಾನವಿಕಾಸ ಸಮನ್ವಯಾಧಿಕಾರಿ  ಸರಿತಾ, ಸೇವಾ ಪ್ರತಿನಿಧಿ ಇಂದಿರಾ ಉಪಸ್ಥಿತರಿದ್ದರು.  ಕೇಂದ್ರದ ಸದಸ್ಯರಿಗೆ ಔಷದದ ಗಿಡಗಳನ್ನು ವಿತರಿಸಿ ನಾಟಿ ಮಾಡಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)