varthabharthi



ರಾಷ್ಟ್ರೀಯ

ಹಲವರಿಗೆ ಗಾಯ

ಬಿಹಾರದಲ್ಲಿ ಸಿಡಿಲು ಬಡಿದು 83 ಮಂದಿ ಮೃತ್ಯು

ವಾರ್ತಾ ಭಾರತಿ : 25 Jun, 2020

ಹೊಸದಿಲ್ಲಿ: 24 ಗಂಟೆಗಳಲ್ಲಿ ಬಿಹಾರ ರಾಜ್ಯದಲ್ಲಿ ಸಿಡಿಲು ಬಡಿದು 83 ಮಂದಿ ಮೃತಪಟ್ಟಿದ್ದು, ಅಪಾರ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.

ರಾಜ್ಯದ 23 ಜಿಲ್ಲೆಗಳಲ್ಲಿ 83 ಮಂದಿ ಮೃತಪಟ್ಟಿದ್ದು, ಗೋಪಾಲ್ ಗಂಜ್ ನಲ್ಲಿ ಗರಿಷ್ಠ ಅಂದರೆ 13 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.

20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಿಡಿಲಿನ ಆಘಾತಕ್ಕೆ ಅಪಾರ ಸೊತ್ತು ಹಾನಿ ಸಂಭವಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)