varthabharthiರಾಷ್ಟ್ರೀಯ

ಗಡಿ ವಿಚಾರದಲ್ಲಿ ಬಿಜೆಪಿ ಜೊತೆ ನಿಲ್ಲುತ್ತೇನೆ: ಬಿಎಸ್ಪಿ ನಾಯಕಿ ಮಾಯಾವತಿ

ವಾರ್ತಾ ಭಾರತಿ : 29 Jun, 2020

ಹೊಸದಿಲ್ಲಿ: ಚೀನಾ ಜೊತೆಗಿನ ಗಡಿ ವಿವಾದ ವಿಚಾರದಲ್ಲಿ ತಾನು ಬಿಜೆಪಿಯನ್ನು ಬೆಂಬಲಿಸುವುದಾಗಿ ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

“ಭಾರತ-ಚೀನಾ ಗಡಿ ವಿವಾದದಲ್ಲಿ ಬಹುಜನ ಸಮಾಜ ಪಾರ್ಟಿ ಬಿಜೆಪಿ ಜೊತೆ ನಿಲ್ಲುತ್ತದೆ. ಭಾರತ-ಚೀನಾ ಗಡಿ ವಿಚಾರದಲ್ಲಿ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಬಿಜೆಪಿ-ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇದು ಚಿಂತೆಯ ವಿಚಾರ” ಎಂದು ಮಾಯಾವತಿ ಹೇಳಿದ್ದಾರೆ.

ನಿರ್ಲಕ್ಷ್ಯಕ್ಕೊಳಗಾದ ಜನರು, ಹಿಂದುಳಿದ ವರ್ಗದವರು ಮತ್ತು ಬುಡಕಟ್ಟು ಜನಾಂಗಗಳಿಗೆ ಕಾಂಗ್ರೆಸ್ ಏನನ್ನೂ ಮಾಡದ ಕಾರಣ ಬಿಎಸ್ಪಿ ಸ್ಥಾಪನೆಯಾಯಿತು. ಬಿಎಸ್ಪಿ ಯಾರದ್ದೇ ಆಟಿಕೆಯ ವಸ್ತುವಲ್ಲ ಎಂದು ನಾನು ಬಿಜೆಪಿ ಮತ್ತು ಕಾಂಗ್ರೆಸ್ ಗೆ ಹೇಳಲು ಬಯಸುತ್ತೇನೆ ಎಂದವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)