varthabharthiಕರ್ನಾಟಕ

15 ಐಎಎಸ್ ಅಧಿಕಾರಿಗಳ ವರ್ಗಾವಣೆ

ವಾರ್ತಾ ಭಾರತಿ : 29 Jun, 2020

ಬೆಂಗಳೂರು, ಜೂ.29: ರಾಜ್ಯ ಸರಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನೆಲೆಯಲ್ಲಿ 15 ಮಂದಿ ಐಎಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಜವನೋಪಾಯ ಯೋಜನೆಯ ಯೋಜನಾ ನಿರ್ದೇಶಕರಾಗಿ ಡಾ.ಎಂ.ಟಿ.ರೇಜು, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕಿ-ದೀಪಾ ಎಂ., ಸಹಕಾರ ಸಂಘಗಳ ರಿಜಿಸ್ಟ್ರಾರ್-ಎಸ್.ಝಿಯಾವುಲ್ಲಾ, ಮೈಸೂರಿನ ಮೈಶುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕಿ-ಡಾ.ಬಿ.ಆರ್.ಮಮತಾ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಂ.ಜಿ.ಹಿರೇಮಠ.

ಬಿಬಿಎಂಪಿ ವಿಶೇಷ ಆಯುಕ್ತ(ಆರ್ಥಿಕ ಮತ್ತು ಐಟಿ)-ಪೊಮ್ಮಲ ಸುನೀಲ್ ಕುಮಾರ್, ಗದಗ ಜಿಲ್ಲಾಧಿಕಾರಿಯಾಗಿ ಸುಂದರೇಶ್ ಬಾಬು ಎಂ., ಬೆಂಗಳೂರಿನ ಹೆಚ್ಚುವರಿ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ-ಪವನ್‍ ಕುಮಾರ್ ಮಲಪತಿ, ಕೊಪ್ಪಳ ಜಿಲ್ಲಾಧಿಕಾರಿಯಾಗಿ ಸುರಲ್ಕರ್ ವಿಕಾಸ್ ಕಿಶೋರ್.

ಧಾರವಾಡ ಜಿಲ್ಲಾಧಿಕಾರಿ- ನಿತೇಶ್ ಪಾಟೀಲ್, ಆರ್ಥಿಕ ಇಲಾಖೆ(ಬಜೆಟ್ ಹಾಗೂ ಸಂಪನ್ಮೂಲ)ಯ ಸರಕಾರದ ಉಪ ಕಾರ್ಯದರ್ಶಿ-ಚಂದ್ರಶೇಖರ್ ನಾಯಕ್ ಎಲ್., ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಭೂಬಾಲನ್ ಟಿ., ಬಿಎಂಆರ್ ಡಿಎ ಆಯುಕ್ತ-ಪಿ.ವಸಂತ ಕುಮಾರ್, ಅಟಲ್ ಜನಸ್ನೇಹಿ ಕೇಂದ್ರದ ನಿರ್ದೇಶಕಿ-ಗಂಗೂ ಬಾಯಿ ರಮೇಶ್ ಮನ್ಕರ್ ಹಾಗೂ ಕರ್ನಾಟಕ ಏಡ್ಸ್ ನಿಯಂತ್ರಣ ಸೊಸೈಟಿಯ ಯೋಜನಾ ನಿರ್ದೇಶಕಿಯನ್ನಾಗಿ ಎಸ್.ಹೊನ್ನಾಂಬಾ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)