varthabharthiರಾಷ್ಟ್ರೀಯ

99ರವರೆಗೆ ನಾವು ಎಲ್ಲ ಯುದ್ಧ ಗೆದ್ದಿದ್ದೇವೆ; ಇದೀಗ ನಿಮ್ಮ ಸರದಿ...

ವಾರ್ತಾ ಭಾರತಿ : 30 Jun, 2020

ಚಂಡೀಗಢ: ಸೇನಾ ವಿಚಾರಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಖ್ಯಾತರಾಗಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಲಡಾಖ್ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಗೆ ಸಂಬಂಧಿಸಿದಂತೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1948, 1965, 1971 ಮತ್ತು 1999ರ ಯುದ್ಧವನ್ನು ನಾವು ಗೆದ್ದಿದ್ದೇವೆ. ಚೀನಾದ ಆಕ್ರಮಣದ ಬಗ್ಗೆ ಇದೀಗ ಪ್ರತಿಕ್ರಿಯಿಸುವುದು ನಿಮ್ಮ ಸರದಿ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ನಮಗೆ 1960ರ ದಶಕದಿಂದಲೂ ಚೀನಾದ ಕಿರಿ ಕಿರಿ ಇತ್ತು. ಗಲ್ವಾಲ್ ಘರ್ಷಣೆ ಮೊದಲನೆಯದೇನಲ್ಲ. ಭಾರತ ಸರ್ಕಾರ ಅಗತ್ಯ ಸೇನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎನ್ನುವು ಖಾತರಿ ನನಗಿದೆ. ಅಕ್ಷಯ್ ಚಿನ್ ಮತ್ತು ಸಿಯಾಚಿನ್ ನಡುವಿನ ಅಂತರವನ್ನು ಕಿರಿದುಗೊಳಿಸಿ, ಭಾರತ ಆ ಪ್ರದೇಶಕ್ಕೆ ಸಂಪರ್ಕ ಸಾಧಿಸಲು ಅವಕಾಶ ನೀಡದಿರುವ ಅವರ ಉದ್ದೇಶದ ಬಗ್ಗೆ ನಾವು ಎಚ್ಚರ ಇರಬೇಕು ಎಂದು ಸಲಹೆ ಮಾಡಿದರು.

ಕೋವಿಡ್-19 ವಿರುದ್ಧದ ಸಮರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಪಿಎಂ-ಕೇರ್ಸ್‌ ನಿಧಿಗೆ ಚೀನಿ ಕಂಪನಿಗಳು ನೀಡಿದ ದೇಣಿಗೆ ಯನ್ನು ವಾಪಾಸು ಮಾಡಿ ಎಂದು ಅವರು ಸಲಹೆ ಮಾಡಿದರು. ಚೀನಾ ವಿರುದ್ಧ ಕಠಿಣ ನಿಲುವನ್ನು ಹೊಂದಬೇಕು ಎಂದು ಅವರು ಅಭಿಪ್ರಾಯಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)