varthabharthiರಾಷ್ಟ್ರೀಯ

ತೆಲಂಗಾಣದ ಗೃಹ ಸಚಿವ ಮಹ್ಮೂದ್ ಅಲಿಗೆ ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 30 Jun, 2020

ಹೈದರಾಬಾದ್, ಜೂ.30: ತೆಲಂಗಾಣ ರಾಜ್ಯದ ಗೃಹ ಸಚಿವ ಮುಹಮ್ಮದ್ ಮಹ್ಮೂದ್ ಅಲಿ ಅವರಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ.

ಅಲಿ ಅವರ ಗನ್ ಮ್ಯಾನ್‌ಗೆ ಕೋವಿಡ್-19 ಸೋಂಕು ಇತ್ತು. ಆತನಿಂದಲೆ ತನಗೆ ಸೋಂಕು ಬಂದಿರಬಹುದು ಎಂದು ಅಲಿ ಹೇಳಿದ್ದಾರೆ.

 ಅಲಿ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಕೋವಿಡ್-19 ಸೋಂಕಿನ ಲಕ್ಷಣ ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲಿ ಅವರಿಗೆ ಜ್ವರ, ಉಸಿರಾಟದ ಸಮಸ್ಯೆ ಹಾಗೂ ಶೀತ ಹಾಗೂ ಕಫ ಕಾಣಿಸಿಕೊಂಡಿತ್ತು. ಶೀತದ ಸಮಸ್ಯೆಯಿದ್ದರೂ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಸರಕಾರದ ಕಾರ್ಯಕ್ರಮಗಳಲ್ಲಿ ಅಲಿ ಭಾಗವಹಿಸಿದ್ದರು.

ತೆಲಂಗಾಣದ ಮೂವರು ಶಾಸಕರಿಗೂ ಕೊರೋನ ಸೋಂಕು ತಗಲಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)