ಪಿಎಸ್ಡಿ ಬ್ಯಾಂಕ್ ನೋರ್ಡ್ ಜಯಿಸಿದ ಸುಮಿತ್ ನಾಗಲ್
ಪಿನ್ನೆಬರ್ಗ್: ಜರ್ಮನಿಯಲ್ಲಿ ನಡೆಯುತ್ತಿರುವ ಪಿಎಸ್ಡಿ ಬ್ಯಾಂಕ್ ನಾರ್ಡ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಸುಮಿತ್ ನಾಗಲ್ ಜಯಗಳಿಸುವ ಮೂಲಕ ಕೋವಿಡ್ 19- ವಾತಾವರಣದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ
ಇದೀಗ ಭಾರತದ ಅತ್ಯುನ್ನತ ಶ್ರೇಯಾಂಕದ ಸಿಂಗಲ್ಸ್ ಆಟಗಾರನಾಗಿರುವ ನಾಗಲ್ ಅವರು ಎರಡನೇ ಶ್ರೇಯಾಂಕಿತ ಜರ್ಮನ್ ಡೇನಿಯಲ್ ಮಸೂರ್ ಅವರನ್ನು 6-1, 6-3 ಸೆಟ್ಗಳಿಂದ ಸೋಲಿಸಿದರು. ಪಿನ್ನೆಬರ್ಗ್ ಟೆನಿಸ್ ಕ್ಲಬ್ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದರು. ನಾಗಲ್ ಮಾರ್ಚ್ ಆರಂಭದಲ್ಲಿ ಕೊನೆಯ ಬಾರಿ ಕ್ರೊಯೇಷಿಯಾದ ಮರಿನ್ ಸಿಲಿಕ್ ವಿರುದ್ಧ ಡೇವಿಸ್ ಕಪ್ ರಿವರ್ಸ್ ಸಿಂಗಲ್ಸ್ನ ಸ್ಪರ್ಧಾತ್ಮಕ ಪಂದ್ಯವನ್ನು ಆಡಿದ್ದರು. ಪಂದ್ಯಾವಳಿಯಲ್ಲಿನ ಅನುಭವವು ಈ ಹಿಂದೆ ಆಡಿದ್ದಕ್ಕಿಂತ ಭಿನ್ನವಾಗಿತ್ತು ಎಂದು ಭಾರತೀಯರು ಹೇಳಿದರು.
Next Story