varthabharthi


ಅಂತಾರಾಷ್ಟ್ರೀಯ

ಪಚ್ಚೆ ಹರಳು ಗಣಿಯಲ್ಲಿ ಭಾರೀ ಭೂಕುಸಿತ: ಕನಿಷ್ಠ 113 ಕಾರ್ಮಿಕರು ಮೃತ್ಯು

ವಾರ್ತಾ ಭಾರತಿ : 2 Jul, 2020

ಮ್ಯಾನ್ಮಾರ್: ಉತ್ತರ ಮ್ಯಾನ್ಮಾರ್ ನ ಕಚಿನ್ ರಾಜ್ಯದ ಹಪಾಕಂತ್ ಪ್ರದೇಶದಲ್ಲಿ ಪಚ್ಚೆ ಹರಳು ಗಣಿಯೊಂದರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 113 ಕಾರ್ಮಿಕರು ಅಸುನೀಗಿದ್ದಾರೆ. ದುರಂತದಲ್ಲಿ ಮಡಿದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಈ ದುರ್ಘಟನೆ ಸಂಭವಿಸಿದ್ದು, ಗಣಿ ಕಾರ್ಮಿಕರು ಮಣ್ಣಿನ ರಾಶಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಇಲ್ಲಿಯ ತನಕ 113 ಶವಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಪಾಕಂತ್ ಪ್ರದೇಶದ ಗಣಿಗಳಲ್ಲಿ ಭೂಕುಸಿತಗಳು ಸಾಮಾನ್ಯವಾಗಿದ್ದು, ಹೆಚ್ಚಾಗಿ ಇಲ್ಲಿನ  ಕಾರ್ಮಿಕರು ಬಡ ಕುಟುಂಬಗಳಿಂದ ಬಂದವರಾಗಿದ್ದಾರೆ.

2016ರಲ್ಲಿ ಆಂಗ್ ಸಾನ್ ಸೂ ಕಿ ಅವರ ಸರಕಾರ ಅಧಿಕಾರಕ್ಕೆ ಬಂದಾಗ ಗಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಲಾಗಿತ್ತಾದರೂ ಈ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)