varthabharthi


ಕರ್ನಾಟಕ

ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಕ್ಕೆ ಹೊಸ ಸದಸ್ಯರ ಸೇರ್ಪಡೆ

ವಾರ್ತಾ ಭಾರತಿ : 2 Jul, 2020

ಬೆಂಗಳೂರು, ಜು.2: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿ ಆದೇಶಿಸಲಾಗಿದೆ.

ಕರ್ನಾಟಕ ಲಲಿತಕಲಾ ಅಕಾಡೆಮಿ: ರಾಘವೇಂದ್ರ(ಬೆಂಗಳೂರು), ಲ.ಅಶೋಕ(ಬಳ್ಳಾರಿ), ವೀರೇಶ ರುದ್ರಸ್ವಾಮಿ(ಬಾಗಲಕೋಟೆ), ಮಹದೇವ ದಂಡಿನ(ಚಾಮರಾಜನಗರ), ಶ್ರೀಕಾಂತ್ ರಾಜ್(ಬೆಂಗಳೂರು ಗ್ರಾಮಾಂತರ) ಹಾಗೂ ಸೌಮ್ಯಾ ಮಂಜುನಾಥ(ಬೆಂಗಳೂರು).

ಕರ್ನಾಟಕ ಜಾನಪದ ಅಕಾಡೆಮಿ: ಸಿ.ಎಂ.ನರಸಿಂಹಮೂರ್ತಿ(ಚಾಮರಾಜನಗರ), ಜೋಗಿಲ ಸಿದ್ದರಾಜು(ರಾಮನಗರ), ಡಾ.ನಾರಾಯಣಪ್ಪ(ಸಿಂಧನೂರು), ಶಿಲ್ಪ ಮುಡಬಿ(ಬೆಳಗಾವಿ) ಹಾಗೂ ಮಹಾರುದ್ರಪ್ಪ ವೀರಪ್ಪ ಇಟಗಿ(ಹಾವೇರಿ).

ಕರ್ನಾಟಕ ಸಾಹಿತ್ಯ ಅಕಾಡೆಮಿ: ನಲ್ಲತಂಬಿ(ಮೈಸೂರು), ದತ್ತಗುರು ಹೆಗಡೆ(ಉತ್ತರ ಕನ್ನಡ), ಮಡಿವಾಳಪ್ಪ ಮುಳಚಂಡಿ(ಕಲಬುರಗಿ), ವನಜಾ(ಬೆಂಗಳೂರು), ಮಾರುತಿ ಕಟ್ಟಿಮನಿ(ಧಾರವಾಡ), ಬಸವರಾಜ ಜಗದಂಪಿ(ಬೆಳಗಾವಿ), ದೀಪ್ತಿ(ಶಿವಮೊಗ್ಗ) ಹಾಗೂ ಡಾ.ಪ್ರಸನ್ನಕುಮಾರ್(ತುಮಕೂರು).

ಕರ್ನಾಟಕ ನಾಟಕ ಅಕಾಡೆಮಿ: ಬಿಸ್ಲೆಹಳ್ಳಿ ಸೋಮಶೇಖರ(ಚಿಕ್ಕಮಗಳೂರು), ಎ.ಪಿ.ಸೂರನಾಯಕ್(ಬೆಳಗಾವಿ), ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ(ಉತ್ತರ ಕನ್ನಡ) ಹಾಗೂ ರಾಚಪ್ಪ ಬಡಿಗೇರ(ಬಾಗಲಕೋಟೆ).

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ: ಡಾ.ಶೋಭಾ ಶಶಿಕುಮಾರ(ಬೆಂ.ಗ್ರಾಮಾಂತರ), ಸಿ.ಕೆ.ಅಂಜಲಿ ಶೆಟ್ಟಿ(ಶಿವಮೊಗ್ಗ), ಸೌಮ್ಯಶ್ರೀ(ಹಾಸನ), ನಾಗೇಶ ಹೆಬ್ಬಾಳೆ(ಬೆಂಗಳೂರು) ಹಾಗೂ ಸ್ಮೃತಿ ಹರಿತ್ಸ(ಬೆಂಗಳೂರು).

ಕರ್ನಾಟಕ ಅರೆ ಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ: ಡಾ.ದಯಾನಂದ ಕೆ.ಸಿ(ಮಡಿಕೇರಿ), ಕುಸುಮಾಧರ ಎ.ಟಿ(ದಕ್ಷಿಣ ಕನ್ನಡ), ಡಾ.ವಿಶ್ವನಾಥ ಬದಿಕಾನ(ದಕ್ಷಿಣ ಕನ್ನಡ), ಜಯಪ್ರಕಾಶ್ ಮೋಂಟಡ್ಕ(ದಕ್ಷಿಣ ಕನ್ನಡ), ಪುರುಷೋತ್ತಮ ಕಿರ್ಲಾಯ(ದಕ್ಷಿಣ ಕನ್ನಡ) ಹಾಗೂ ಭಾರತಿ ರಮೇಶ್ (ಕೊಡಗು).

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ರಾಧಾಕೃಷ್ಣ ನಾವಡ(ಕಾಸರಗೋಡು), ರೂಪಶ್ರೀ ವರ್ಕಾಡಿ(ಕಾಸರಗೋಡು), ನಝೀರ್ ಪೊಲ್ಯ(ಉಡುಪಿ) ಹಾಗೂ ಶಂಶೀರ್ ಬುಡೋಳಿ(ದಕ್ಷಿಣ ಕನ್ನಡ).

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ರವಿ ಪಿ.ಎಮ್(ಮಡಿಕೇರಿ), ನರೇಂದ್ರ ಕೆರೆಕಾಡು(ಮುಲ್ಕಿ), ಸರ್ವೋತ್ತಮ ಶೆಟ್ಟಿ(ದುಬೈ), ಸಂತೋಷಕುಮಾರ(ಬೆಳ್ತಂಗಡಿ) ಹಾಗೂ ಕಲಾವತಿ(ಉಡುಪಿ).

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಯತೀಂದ್ರನಾಥ(ಶಿವಮೊಗ್ಗ), ಪ್ರೊ.ರಾಘವೇಂದ್ರ ಪಾಟೀಲ(ಧಾರವಾಡ) ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಡಾ.ಕಿಶೋರ್ ರನ್ನು ಸದಸ್ಯರನ್ನಾಗಿ ಸೇರ್ಪಡೆಗೊಳಿಸಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)