varthabharthi


ರಾಷ್ಟ್ರೀಯ

ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ನಿಧನ

ವಾರ್ತಾ ಭಾರತಿ : 3 Jul, 2020

ಹೊಸದಿಲ್ಲಿ, ಜು.3: ಬಾಲಿವುಡ್‌ನ ಹಿರಿಯ ಕೊರಿಯೋಗ್ರಾಫರ್ ಸರೋಜ್ ಖಾನ್ ಶುಕ್ರವಾರ ಮುಂಬೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಜೂನ್ 20ರಂದು ಸರೋಜ್‌ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದಾಗ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್-19 ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿತ್ತು.

ಬೆಳಗ್ಗಿನ ಜಾವ 2:30ರ ಸುಮಾರಿಗೆ ಹೃದಯಾಘಾತದಿಂದ ಸರೋಜ್ ಖಾನ್ ನಿಧನರಾದರು ಎಂದು ಸರೋಜ್ ಖಾನ್ ಸಂಬಂಧಿ ಮನೀಷ್ ಜಾಗ್ವಾನಿ ಹೇಳಿದ್ದಾರೆ.

ಕೊರಿಯೋಗ್ರಾಫರ್‌ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದ ಸರೋಜ್ ಅವರು ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ಅಭಿನಯಿಸಿದ ದೇವದಾಸ ಚಿತ್ರದ ಡೋಲಾ ರೆ ಡೋಲಾ, ತಮಿಳಿನ ಶೃಂಗಾರಂ ಚಿತ್ರದ ಎಲ್ಲ ಗೀತೆಗಳು ಸಹಿತ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಸರೋಜ್ ಖಾನ್ ಅವರು ಪತಿ ಸೋಹನ್‌ಲಾಲ್, ಪುತ್ರ ರಾಜು ಹಾಗೂ ಪುತ್ರಿಯರಾದ ಹಿನಾ ಹಾಗೂ ಸುಕನ್ಯಾರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)