ಶಿವಮೊಗ್ಗ: ಎರಡು ದಿನದ ಹಿಂದೆ ಮೃತಪಟ್ಟ ವೃದ್ಧೆಗೆ ಕೊರೋನ ಸೋಂಕು ದೃಢ
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಕಳೆದ ಎರಡು ದಿನದ ಹಿಂದೆ ಶಿವಮೊಗ್ಗದ ತುಂಗಾ ನಗರದ ತನ್ನ ಮನೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ವೃದ್ಧೆಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ.
ಇವರು ಎರಡು ದಿನದ ಹಿಂದೆ ಮೃತಪಟ್ಟಿದ್ದರು. ನಂತರ ಈಕೆಯ ಗಂಟಲು ದ್ರವ ಪರೀಕ್ಷೆ ಟೆಸ್ಟ್ ಮಾಡಿಸಲಾಗಿತ್ತು. ಇಂದು ಇದರ ವರದಿ ಬಂದಿದ್ದು, ಮೃತ ವೃದ್ಧೆಗೆ ಕೋವಿಡ್-19 ಸೋಂಕು ಇರುವುದು ದೃಢವಾಗಿದೆ.
ಒಟ್ಟಾರೆ ಇದುವರೆಗೆ ಕೋವಿಡ್ ಸೋಂಕಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಲ್ವರು ಬಲಿಯಾಗಿದ್ದಾರೆ.
Next Story