varthabharthi


ಕ್ರೀಡೆ

ಯುಎಫ್ ಸಿ ಸೂಪರ್ ಸ್ಟಾರ್ ಖಬೀಬ್ ತಂದೆ ಅಬ್ದುಲ್ ಮನಾಫ್ ನಿಧನ

ವಾರ್ತಾ ಭಾರತಿ : 3 Jul, 2020

ಹೊಸದಿಲ್ಲಿ: ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ ನ ಸೂಪರ್ ಸ್ಟಾರ್ ಖಬೀಬ್ ಅಬ್ದುಲ್ ಮುನಾಫ್ ನೂರ್ ಮುಹಮ್ಮದ್ ಅವರ ತಂದೆ ಅಬ್ದುಲ್ ಮನಾಫ್ ಇಂದು ನಿಧನರಾಗಿದ್ದಾರೆ.

57 ವರ್ಷದವರಾಗಿರುವ ಅಬ್ದುಲ್ ಮನಾಫ್ ಕೆಲ ದಿನಗಳಿಂದ ಕೊರೋನ ವೈರಸ್ ನಿಂದ ಬಳಲುತ್ತಿದ್ದರು. ನಂತರ  ಹೃದಯದ ಶಸ್ತ್ರಚಿಕಿತ್ಸೆಗೊಳಗಾದ ಅವರ ಆರೋಗ್ಯ ಹದಗೆಟ್ಟಿತ್ತು.

“ಬೇಸರದ ಸುದ್ದಿ ಕೇಳಿ ಬಂದಿದೆ. ಅಬ್ದುಲ್ ಮನಾಫ್ ನಮ್ಮನ್ನು ಅಗಲಿದ್ದಾರೆ” ಎಂದು ರಾಜಕೀಯ ನಾಯಕ, ಖಬೀಬ್ ಅವರ ಸ್ನೇಹಿತ ರಮಝಾನ್ ಕದಿರೋವ್ ಮಾಹಿತಿ ನೀಡಿದ್ದಾರೆ.

ಖಬೀಬ್ ಅವರ ಕೋಚ್ ಆಗಿದ್ದ ಅಬ್ದುಲ್ ಮನಾಫ್ ಮಿಕ್ಸಡ್ ಮಾರ್ಶಿಯಲ್ ಆರ್ಟ್ಸ್ ನಲ್ಲಿ ವಿಶ್ವಪ್ರಸಿದ್ಧ ಕೋಚ್ ಆಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)