varthabharthi


ಕರಾವಳಿ

ವಶಕ್ಕೆ ಪಡೆದ ದ್ವಿಚಕ್ರ ವಾಹನಗಳ ಬಹಿರಂಗ ಏಲಂ

ವಾರ್ತಾ ಭಾರತಿ : 3 Jul, 2020

ಉಡುಪಿ, ಜೂ.24: ಉಡುಪಿ ಸಂಚಾರ ಪೊಲೀಸ್ ಠಾಣೆಯ ಆವರಣ ದಲ್ಲಿ ಅಪಘಾತಕ್ಕೆ ಸಂಬಂಧಪಟ್ಟ 9 ದ್ವಿಚಕ್ರ ವಾಹನಗಳಿದ್ದು ಈ ವಾಹನಗಳನ್ನು ವಾರೀಸುದಾರರು ಈವರೆಗೆ ತಮ್ಮ ವಶಕ್ಕೆ ಪಡೆದುಕೊಳ್ಳಲು ವಿಫಲರಾಗಿದ್ದಾರೆ.

ಕೆಎ03ಎಕ್ಸ್974, ಚಾಸಿಸ್ ನಂಬರ್ ವಿಬಿಕೆಜೆಯುಸಿ4ಜಿ5ಇಸಿಓ27300 ನೊಂದಣಿಯಾಗದ ಬೈಕ್, ಕೆಎ20ಕೆ3567, ಕೆಎ20ಡಬ್ಲು7011, ಕೆಎ21ಆರ್ 0677, ಕೆಎ09 ಇಕೆ 6871, ಕೆಎ20ಇಎ6246, ಕೆಎ20ಇಎಚ್0925, ಕೆಎ19ಡಬ್ಲು9268 ಈ ನಂಬರ್‌ಗಳನ್ನು ಹೊಂದಿರುವ ವಾಹನಗಳಿಗೆ ಸಂಬಂಧಪಟ್ಟಂತೆ ವಾರೀಸುದಾರರು ಯಾರಾದರೂ ಇದ್ದಲ್ಲಿ ಅಥವಾ ಈ ವಾಹನಗಳ ಸಾಲಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್‌ದಾರರು ಮತ್ತು ಇನ್ಸೂರೆನ್ಸ್ ಕಂಪನಿಗಳಿಗೆ ಅವಶ್ಯಕತೆ ಇದ್ದಲ್ಲಿ ದಾಖಲಾತಿಗಳೊಂದಿಗೆ ನ್ಯಾಯಾಲಯದಲ್ಲಿ ವ್ಯವಹರಿಸಿ 15 ದಿನಗಳ ಒಳಗೆ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ನ್ಯಾಯಾಲಯದ ಆದೇಶದಂತೆ ಬಹಿರಂಗ ಏಲಂ ಮಾಡಲಾಗುವುದು ಎಂದು ಉಡುಪಿ ಸಂಚಾರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)