varthabharthi


ರಾಷ್ಟ್ರೀಯ

ಆಘಾತಕಾರಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ಢಿಕ್ಕಿ ಹೊಡೆದ ನಂತರ ಮಹಿಳೆಯ ಮೇಲೆ ಕಾರು ಹರಿಸಿದ ಚಾಲಕ

ವಾರ್ತಾ ಭಾರತಿ : 4 Jul, 2020

ಹೊಸದಿಲ್ಲಿ : ಮಹಿಳೆಯೊಬ್ಬರಿಗೆ ಕಾರಿನಲ್ಲಿ ಢಿಕ್ಕಿ ಹೊಡೆದ ನಂತರ ಆಕೆಯ ಮೇಲೆ ಕಾರು ಹರಿಸಿದ ಚಾಲಕ ಪರಾರಿಯಾಗಿರುವ ಘಟನೆ ನಡೆದಿದೆ. ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೂರ್ವ ದಿಲ್ಲಿಯ ಗಝೀಪುರ್ ಪ್ರದೇಶದ ಚಿಲ್ಲಾ ಎಂಬಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ವೇಗವಾಗಿ ಸಾಗುತ್ತಿದ್ದ ಕಾರು ಮಹಿಳೆಗೆ ಢಿಕ್ಕಿ ಹೊಡೆದ ರಭಸಕ್ಕೆ ಆಕೆ ಕಾರಿನ ಬಾನೆಟ್ ಮೇಲೆ ಸಿಕ್ಕಿ ಹಾಕಿಕೊಂಡು ಕಾರು ಇಕ್ಕಟ್ಟಾದ ಗಲ್ಲಿಯಲ್ಲಿ ನಿಲ್ಲುತ್ತಲೇ ಮಹಿಳೆ ಕಾರಿನ ಬಾನೆಟ್‍ ನಿಂದ ಕೆಳಕ್ಕೆ ಜಾರಿ ಬೀಳುತ್ತಾರೆ. ಹತ್ತಿರದಲ್ಲಿದ್ದ ಜನರು ಇನ್ನೇನು ಧಾವಿಸಿ ಮಹಿಳೆಯನ್ನು ರಕ್ಷಿಸಬೇಕೆನ್ನುವಷ್ಟರಲ್ಲಿ ಕಾರನ್ನು ಮತ್ತೊಮ್ಮೆ ಚಲಾಯಿಸಿದ ಚಾಲಕ ಮತ್ತೆ ಕಾರನ್ನು ಮಹಿಳೆಯ ಮೇಲೆ ಹರಿಸಿ ಅಲ್ಲಿಂದ ವಾಹನ ಪರಾರಿಯಾಗಿರುವುದು ಸೀಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸುತ್ತದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)