varthabharthi


ರಾಷ್ಟ್ರೀಯ

ಸಹಾಯ ದೊರೆಯದೆ ಮಹಿಳೆ ಸಾವು

ಅಸ್ವಸ್ಥ ತಾಯಿಗೆ ಚಿಕಿತ್ಸೆ ನೀಡಲು ಸಮುದಾಯ ಕೇಂದ್ರದ ಬಾಗಿಲು ಬಡಿದು ಅಂಗಲಾಚಿದ ವ್ಯಕ್ತಿ: ವಿಡಿಯೋ ವೈರಲ್

ವಾರ್ತಾ ಭಾರತಿ : 4 Jul, 2020

ಲಕ್ನೋ: ಸಮುದಾಯ ಆರೋಗ್ಯ ಕೇಂದ್ರದ ಹೊರಗೆ ಪುತ್ರನೊಬ್ಬ ತನ್ನ ಅಸ್ವಸ್ಥ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಅಂಗಲಾಚುತ್ತಾ ಬಾಗಿಲು ಬಡಿಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ಕೊನೆಗೆ ಆ ಮಹಿಳೆಗೆ ಸಹಾಯ ದೊರೆಯದ ಕೊನೆಯುಸಿರೆಳೆದಿದ್ದಾರೆ.

ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಸವೈಜೋರ್ ಎಂಬಲ್ಲಿ ಈ ಘಟನೆ ನಡೆದಿದೆ.

ತನ್ನ ತಾಯಿಯ ಸ್ಥಿತಿಯನ್ನು ನೋಡಿ ಪುತ್ರ ಬಿಕ್ಕಿ ಬಿಕ್ಕಿ ಅಳುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಯಾರಾದರೂ ಸಹಾಯ ಮಾಡುತ್ತಾರೆಯೇ ಎಂದು ಕೂಗುತ್ತಾ ಆತ ಕಿಟಕಿಯೊಂದರ ಗಾಜು ಕೂಡ ಒಡೆಯುತ್ತಿರುವುದು ಕಾಣಿಸುತ್ತದೆ.ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯಾಡಳಿತದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಆ ವ್ಯಕ್ತಿ ಸಮುದಾಯ ಆರೋಗ್ಯ ಕೇಂದ್ರದ  ಸರಿಯಾದ ಪ್ರವೇಶ ದ್ವಾರದ ಬಳಿ ಬಾರದೇ ಇದ್ದುದರಿಂದ  ಆತ ಅಲ್ಲಿರುವುದು ಯಾರ ಗಮನಕ್ಕೂ ಬಂದಿಲ್ಲ. ಕೇಂದ್ರದ ಹಿಂಬದಿಯ ಗೇಟಿನ ಮೂಲಕ ಗರ್ಭಿಣಿ ಮಹಿಳೆಯರು ಹಾಗೂ ತುರ್ತುಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಅನುಮತಿಸಲಾಗುತ್ತದೆ ಎಂದು ಸಮುದಾಯ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ. ಮಹಿಳೆಯನ್ನು ನಂತರ ಅಂಬ್ಯುಲೆನ್ಸ್‍ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಆಕೆ ಅಲ್ಲಿ ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿಕೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)