varthabharthi


ಬೆಂಗಳೂರು

ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 4 Jul, 2020

ಬೆಂಗಳೂರು, ಜು.4: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಕೊರೋನ ಸೋಂಕು ತಗಲಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ದೇವರ ದಯೆ ಹಾಗೂ ಜನತೆಯ ಅಶೀರ್ವಾದದಿಂದ ಬೇಗ ಗುಣಮುಖನಾಗಿ ಬರುತ್ತೇನೆಂದು ಬರೆದುಕೊಂಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದುದರಿಂದ ಕ್ವಾರಂಟೈನ್‍ನಲ್ಲಿ ಇದ್ದೆ. ಗುರುವಾರ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕೊರೋನ ಪಾಸಿಟಿವ್ ಬಂದಿರುವುದು ದೃಢವಾಗಿದೆ. ನಿನ್ನೆ(ಶುಕ್ರವಾರ) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ.

ದೇವರ ದಯೆ ಹಾಗೂ ನಿಮ್ಮ ಅಶೀರ್ವಾದದಿಂದ ಬೇಗ ಗುಣಮುಖನಾಗಿ ಬರುತ್ತೇನೆಂದು ನಂಬಿದ್ದೇನೆ. ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಪಾಡುವ ಮೂಲಕ ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿರಿ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಜನತೆಗೆ ಮನವಿ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)