varthabharthi


ಅಂತಾರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ: ರ್ಯಾಪರ್ ಕಾನ್ಯೆ ವೆಸ್ಟ್ ಘೋಷಣೆ

ವಾರ್ತಾ ಭಾರತಿ : 5 Jul, 2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್ ಎದುರಾಳಿಯಾಗಿ ತಾನು ಸ್ಪರ್ಧಿಸುತ್ತಿದ್ದೇನೆ ಎಂದು ಅಮೆರಿಕನ್ ರ್ಯಾಪರ್, ರೂಪದರ್ಶಿ ಕಿಮ್ ಕರ್ದಾಶಿಯನ್ ಅವರ ಪತಿ ಕಾನ್ಯೆ ವೆಸ್ಟ್ ಘೋಷಿಸಿದ್ದಾರೆ.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಟ್ರಂಪ್ ಬೆಂಬಲಿಗರಾಗಿರುವ ಕಾನ್ಯೆ ವೆಸ್ಟ್ ಈ ಘೋಷಣೆ ಮಾಡಿರುವುದು ಎಲ್ಲರ ಹುಬ್ಬೇರಿಸಿದೆ.

ಇದು ನಿಜವಾದ ಘೋಷಣೆಯೋ ಅಥವಾ ತಮಾಷೆಗಾಗಿ ಈ ಘೋಷಣೆ ಮಾಡಲಾಗಿದೆಯೋ ಎನ್ನುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)