varthabharthi


ರಾಷ್ಟ್ರೀಯ

ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಪ್ರಧಾನಿ ಮೋದಿ

ವಾರ್ತಾ ಭಾರತಿ : 5 Jul, 2020

ಹೊಸದಿಲ್ಲಿ, ಜು.5: ಎರಡು ದಿನಗಳ ಹಿಂದೆ ಲಡಾಖ್‌ಗೆ ಅಚ್ಚರಿ ಭೇಟಿ ನೀಡಿ ನಿಮು ಪ್ರದೇಶದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರವಿವಾರ ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್‌ರನ್ನು ಭೇಟಿಯಾದರು. ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪ್ರಾಮುಖ್ಯ ವಿಷಯಗಳ ಬಗ್ಗೆ ಮಾತನಾಡಿದರು.

ಲೇಹ್‌ಗೆ ಭೇಟಿ ನೀಡಿ ಗಾಯಾಳು ಸೈನಿಕರೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ ಹಾಲ್ ಆಫ್ ಫೇಮ್ ಆರ್ಮಿ ಮ್ಯೂಸಿಯಂನಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)