ಪಿಪಿಇ ಕಿಟ್ ಧರಿಸಿ ಬಂದು ಚಿನ್ನಾಭರಣ ಮಳಿಗೆ ಲೂಟಿ ಮಾಡಿದರು!
ಮಹಾರಾಷ್ಟ್ರ: ಪಿಪಿಇ ಕಿಟ್ ಗಳನ್ನು ಧರಿಸಿದ್ದ ಕಳ್ಳರ ಗುಂಪೊಂದು ಜ್ಯುವೆಲ್ಲರಿಯೊಂದಕ್ಕೆ ನುಗ್ಗಿ 780 ಗ್ರಾಂ ಚಿನ್ನವನ್ನು ಕದ್ದೊಯ್ದಿರುವ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರು ಜ್ಯುವೆಲ್ಲರಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತಿದ್ದಾರೆ. ಶೋಕೇಸ್ ಮತ್ತು ಕಪ್ ಬೋರ್ಡ್ ಗಳಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ಒಯ್ದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕ್ಯಾಪ್, ಮಾಸ್ಕ್ , ಪ್ಲಾಸ್ಟಿಕ್ ಜ್ಯಾಕೆಟ್ ಮತ್ತು ಕೈವಸುಗಳನ್ನು ಧರಿಸಿರುವ ಕಳ್ಳರು ಚಿನ್ನಾಭರಣಗಳನ್ನು ದೋಚುತ್ತಿರುವುದು ಸಿಸಿ ಕ್ಯಾಮರಾದ ವಿಡಿಯೋದಲ್ಲಿ ಕಾಣಿಸುತ್ತದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story