varthabharthi


ರಾಷ್ಟ್ರೀಯ

ಕೊರೋನ ಯೋಧರಿಗೆ 5,000 ರೂ., ಚಿನ್ನದ ನಾಣ್ಯ ನೀಡಿ ಗೌರವಿಸಿದ ಸಂಸದ ಗೋಪಾಲ್ ಶೆಟ್ಟಿ

ವಾರ್ತಾ ಭಾರತಿ : 7 Jul, 2020

ಹೊಸದಿಲ್ಲಿ: ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನ ಯೋಧರಿಗೆ ಮುಂಬೈಯ ಸಂಸದ ಗೋಪಾಲ್ ಶೆಟ್ಟಿ 5,000 ರೂ. ಮತ್ತು 1 ಗ್ರಾಂನ ಚಿನ್ನದ ನಾಣ್ಯವನ್ನು  ನೀಡಿ ಗೌರವಿಸಿದ್ದಾರೆ. ಈ ವಾರಿಯರ್ ಗಳಲ್ಲಿ ಭದ್ರತಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮತ್ತು ಆಡಳಿತದ ಸಿಬ್ಬಂದಿ ಸೇರಿದ್ದಾರೆ.

ಶೆಟ್ಟಿ ಹಿರಿಯ ಬಿಜೆಪಿ ನಾಯಕರಾಗಿದ್ದು, ಮುಂಬೈ ಉತ್ತರ ಕ್ಷೇತ್ರದ ಸಂಸದರಾಗಿದ್ದಾರೆ. ಬೊರಿವಲಿಯಲ್ಲಿ ದ ಸತ್ರ ಪಾರ್ಕ್ ಕೋ ಆಪರೇಟಿವ್ ಸೊಸೈಟಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಂಡರು.

“ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ನಮ್ಮಿಂದಾಗುವ ಪ್ರಯತ್ನವನ್ನು ನಾವು ಮಾಡಬೇಕು” ಎಂದವರು ಹೇಳಿದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)