ಕೊಣಾಜೆ: ಮೂವರು ಕೆಎಸ್ಆರ್ ಪಿ ಪೊಲೀಸರಿಗೆ ಕೊರೋನ ಪಾಸಿಟಿವ್
ಕೊಣಾಜೆ: ಕೊಣಾಜೆ ಗ್ರಾಮದ ಅಸೈಗೋಳಿಯ ಮೂವರು ಕೆಎಸ್ಆರ್ ಪಿ ಸಿಬ್ಬಂದಿಗಳಿಗೆ ಬುಧವಾರ ಕೊರೊನ ಪಾಸಿಟಿವ್ ದೃಡಪಟ್ಟಿದೆ.
41, 27, 24 ವಯಸ್ಸಿನ ಸಿಬ್ಬಂದಿಗಳು ಇತ್ತೀಚೆಗೆ ಬೇರೆ ಕಡೆ ಕಾರ್ಯನಿರ್ವಹಿಸಿ ಅಸೈಗೋಳಿಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದರು. ಇವರನ್ನು ಕೊರೋನ ತಪಾಸಣೆಗೆ ಒಳಪಡಿಸಿದ್ದು, ಬುಧವಾರ ಬಂದ ವರದಿಯಲ್ಲಿ ಈ ಮೂವರು ಸಿಬ್ಬಂದಿಗಳಿಗೆ ಪಾಸಿಟಿವ್ ವರದಿ ಬಂದಿದೆ.
Next Story