varthabharthi


ಕರಾವಳಿ

ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಕೇಶವ ಸಿ. ಸಾಲ್ಯಾನ್

ವಾರ್ತಾ ಭಾರತಿ : 9 Jul, 2020

ಪಡುಬಿದ್ರಿ: ಪ್ರತಿಷ್ಟಿತ ಪಡುಬಿದ್ರಿ ರೋಟರಿ ಕ್ಲಬ್‍ನ ಅಧ್ಯಕ್ಷರಾಗಿ ಯುವನಾಯಕ ಕೇಶವ ಸಿ. ಸಾಲ್ಯಾನ್ ಹೆಜಮಾಡಿ ಇವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ನಿಯಾಝ್, ಕೋಶಾಧಿಕಾರಿಯಾಗಿ ಗೀತಾ ಅರುಣ್ ಅವರು ಆಯ್ಕೆಯಾಗಿದ್ದಾರೆ. 

ಶನಿವಾರ ಪದಗ್ರಹಣ: ಪದಗ್ರಹಣ ಸಮಾರಂಭ ಜುಲೈ 11ರಂದು ಶನಿವಾರ ಪಡುಬಿದ್ರಿಯ ಸಾಯಿ ಆರ್ಕೆಡ್‍ನಲ್ಲಿ ನಡೆಯಲಿದೆ. ಮಾಜಿ ಜಿಲ್ಲಾ ಚಯರ್‍ಮೆನ್ ಇಬ್ರಾಹಿಂ ಸಾಹೇಬ್ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ಸಹಾಯಕ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)