varthabharthi


ರಾಷ್ಟ್ರೀಯ

ಬಿಹಾರ: ನಾಲ್ವರು ನಕ್ಸಲರ ಎನ್‌ಕೌಂಟರ್

ವಾರ್ತಾ ಭಾರತಿ : 10 Jul, 2020

ಪಾಟ್ನಾ, ಜು.10: ಬಿಹಾರದ ಪಶ್ಚಿಮ ಚಂಪರಣ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ. ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ಹಾಗೂ ಸ್ಪೆಷಲ್ ಟಾಸ್ಕ್‌ಫೋರ್ಸ್ (ಎಸ್‌ಟಿಎಫ್)ಸಿಬ್ಬಂದಿ ಇಂದು ಬೆಳಗ್ಗೆ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ.
 ಎನ್‌ಕೌಂಟರ್ ಕುರಿತು ಎಸ್‌ಎಸ್‌ಬಿ ಐಜಿ ಸಂಜಯಕುಮಾರ್ ಮಾಹಿತಿ ನೀಡಿದ್ದು,ಸಾವನ್ನಪ್ಪಿದ ನಕ್ಸಲರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲರಿಂದ ಎಕೆ 56,ಸೆಲ್ಪ್ ಲೋಡಿಂಗ್ ರೈಫಲ್‌ಗಳಿದ್ದವು. ವಾಲ್ಮೀಕಿನಗರದ ಕಾಡಿನಲ್ಲಿ ಎನ್‌ಕೌಂಟರ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)