ಕಲಬುರಗಿ: ಕೇಂದ್ರ ಕಾರಾಗೃಹದ 10 ಖೈದಿಗಳಿಗೆ ಕೊರೋನ ಪಾಸಿಟಿವ್
ಕಲಬುರಗಿ: ಕೋವಿಡ್-19 ವೈರಸ್ ಪ್ರಕರಣಗಳು ಕಲಬುರಗಿ ಜಿಲ್ಲೆಯನ್ನು ಬಿಚ್ಚಿ ಬಿಳಿಸುವಂತೆ ಮಾಡಿದ್ದು, ಪಾಸಿಟಿವ್ ಕೇಸ್ ಗಳು ಎರಡು ಸಾವಿರ ಸಮೀಪಿಸಿದೆ. ಇಂದು ಇಲ್ಲಿನ ಕೇಂದ್ರ ಕಾರಾಗೃಹದ 10 ಖೈದಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಕೊರೋನ ಮಹಾಮಾರಿ ರಾಜಕಾರಣಿಗಳು, ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಎಲ್ಲ ವಲಯದಲ್ಲಿ ಹರಡಿದ್ದು, ಈಗ ವೈರಸ್ ಜೈಲುಗಳಲಿರುವ ಖೈದಿಗಳಿಗೂ ತಟ್ಟುವ ಮೂಲಕ ತನ್ನ ಅಟ್ಟಹಾಸ ಮುಂದುವರಿಸಿದೆ. ಕೋವಿಡ್-19 ಹರಡುವ ಹಿನ್ನೆಲೆ ಮಾರ್ಚ್ ತಿಂಗಳಲ್ಲಿ ಕೇಂದ್ರ ಕಾರಾಗೃಹದ ಸುಮಾರು 70ಕ್ಕೂ ಹೆಚ್ಚು ಖೈದಿಗಳನ್ನು ಪೆರೋಲ್ ಮೇಲೆ ಬಿಡಲಾಗಿತ್ತು.
ಪೆರೋಲ್ ಮುಗಿಸಿ ವಾಪಸ್ ಮರಳಿದ ಖೈದಿಗಳಲ್ಲಿ 10 ಜನ ವಿಚಾರಣಾಧೀನ ಖೈದಿಗಳಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
Next Story