varthabharthi


ಕರಾವಳಿ

ಕಾಪು ಎಎಸ್ಸೈಗೆ ಕೊರೋನ ಪಾಸಿಟಿವ್: ಠಾಣೆ ತಾತ್ಕಾಲಿಕ ಸ್ಥಳಾಂತರ

ವಾರ್ತಾ ಭಾರತಿ : 11 Jul, 2020

ಸಾಂದರ್ಭಿಕ ಚಿತ್ರ

ಕಾಪು, ಜು.11: ಕಾಪು ಪೊಲೀಸ್ ಠಾಣೆಯ ಎಎಸ್ಸೈಯೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಇವರು ಕೋಟದಿಂದ ಕಾಪು ಠಾಣೆಗೆ ಬಸ್ಸಿನಲ್ಲಿ ಪ್ರತಿದಿನ ಸಂಚರಿಸುತ್ತಿದ್ದು, ಇದರಿಂದ ಇವರಿಗೆ ಪಾಸಿಟಿವ್ ಬಂದಿರಬಹುದೆಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಯನ್ನು ಎರಡು ದಿನಗಳ ಕಾಲ ಸಮೀಪದ ವೀರಭದ್ರ ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ.

48 ಗಂಟೆಗಳ ಅವಧಿಯಲ್ಲಿ ಠಾಣೆಯನ್ನು ಸ್ಯಾನಿಟೈಸ್ ಮಾಡಿ, ಮೂರನೆ ದಿನಕ್ಕೆ ಠಾಣೆಯನ್ನು ಮತ್ತೆ ಪುನಾರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)