varthabharthi


ಕರಾವಳಿ

ಉಡುಪಿ: ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಪಿಎಫ್‌ಐ ಕಾರ್ಯಕರ್ತರು

ವಾರ್ತಾ ಭಾರತಿ : 12 Jul, 2020

ಉಡುಪಿ, ಜು.12: ಉಡುಪಿಯಲ್ಲಿ ಮೃತಪಟ್ಟ ದಾವಣಗೆರೆಯ ಕೊರೋನ ವೈರಸ್ ಸೋಂಕಿತರ ಅಂತ್ಯಕ್ರಿಯೆಯನ್ನು ರವಿವಾರ ಉಡುಪಿ ನಗರದ ಖಬರಸ್ತಾನದಲ್ಲಿ ಪಾಪ್ಯುಲರ್ ಫ್ರಂಟ್ ‌ಆಫ್ ಇಂಡಿಯಾದ ಉಡುಪಿ ಜಿಲ್ಲಾ ಕಾರ್ಯಕರ್ತರ ತಂಡ ನೆರವೇರಿಸಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಮೆಡಿಕಲ್ ಇನ್ಚಾರ್ಜ್ ಮುನೀರ್ ಕಲ್ಮಾಡಿ ನೇತೃತ್ವದಲ್ಲಿ ಇರ್ಫಾಝ್, ಶಾಹಿದ್, ಸಫಾಝ್, ಜುರೈ, ಫೈಝಲ್, ಹನ್ನನ್, ಅಶೀಲ್, ಅಶ್ರಫ್ ಆದಿಉಡುಪಿ, ಗಫೂರ್ ಆದಿಉಡುಪಿ ಇವರು ಕೋವಿಡ್-19 ಮಾರ್ಗಸೂಚಿ ಪ್ರಕಾರ ಮೃತದೇಹದ ಅಂತ್ಯಕ್ರಿಯೆಯನ್ನು ಸುರಕ್ಷಿತ ಕ್ರಮಗಳೊಂದಿಗೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಉಡುಪಿ, ಮುಖಂಡರಾದ ರಹ್ಮಾನ್ ಮಲ್ಪೆ, ತಬ್ರೇಝ್ ಉಡುಪಿ ಉಪಸ್ಥಿತರಿದ್ದರು.

ಇತ್ತೀಚೆಗೆ ಉಡುಪಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಕೋವಿಡ್-19 ಮೃತದೇಹದ ಅಂತ್ಯ ಸಂಸ್ಕಾರದ ಕುರಿತು ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಪಿಎಫ್‌ಐ ಉಡುಪಿ ಜಿಲ್ಲೆ ಇದರ ಕಾರ್ಯಕರ್ತರ ತಂಡವನ್ನು ರಚಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)