varthabharthi


ಕ್ರೀಡೆ

ಗೇಬ್ರಿಯಲ್ ಗೆ ಐದು ವಿಕೆಟ್ ಗೊಂಚಲು

ಮೊದಲ ಟೆಸ್ಟ್: ವೆಸ್ಟ್‌ಇಂಡೀಸ್ ಗೆಲುವಿಗೆ 200 ರನ್ ಗುರಿ

ವಾರ್ತಾ ಭಾರತಿ : 12 Jul, 2020

ಹೊಸದಿಲ್ಲಿ, ಜು.12: ವೇಗದ ಬೌಲರ್ ಶನೊನ್ ಟೆರ್ರಿ ಗೇಬ್ರಿಯಲ್(5-75) ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ಇಂಗ್ಲೆಂಡ್ ತಂಡವನ್ನು ವೆಸ್ಟ್‌ಇಂಡೀಸ್ ತಂಡ ಎರಡನೇ ಇನಿಂಗ್ಸ್ ನಲ್ಲಿ 313 ರನ್‌ಗೆ ನಿಯಂತ್ರಿಸಿದೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಬರೋಬ್ಬರಿ 200 ರನ್ ಗುರಿ ಪಡೆದಿದೆ.

ಆತಿಥೇಯ ಇಂಗ್ಲೆಂಡ್ ತಂಡ ಐದನೇ ಹಾಗೂ ಅಂತಿಮ ದಿನವಾದ ರವಿವಾರ ತನ್ನ ಎರಡನೇ ಇನಿಂಗ್ಸ್‌ನ್ನು 8 ವಿಕೆಟ್‌ಗಳ ನಷ್ಟಕ್ಕೆ 284 ರನ್‌ನಿಂದ ಆರಂಭಿಸಿತು. 313 ರನ್ ಗಳಿಸುವಷ್ಟರಲ್ಲಿ ಉಳಿದೆರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ವಿಂಡೀಸ್‌ಗೆ 200 ರನ್ ಗುರಿ ನೀಡಿದೆ.

ವಿಂಡೀಸ್ ಪರವಾಗಿ ಗೇಬ್ರಿಯಲ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಜೋಸೆಫ್(2-45) ಹಾಗೂ ಚೇಸ್(2-71) ತಲಾ ಎರಡು ವಿಕೆಟ್ ಪಡೆದರು.

ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಕ್ರಾವ್ಲೆ(76 ರನ್)ಗರಿಷ್ಟ ರನ್ ಗಳಿಸಿದರು. ಸಿಬ್ಲೆ(50), ಸ್ಟೋಕ್ಸ್(46) ಹಾಗೂ ಬರ್ನ್ಸ್(42)ಎರಡಂಕೆಯ ಸ್ಕೋರ್ ಗಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)