varthabharthi


ಕರಾವಳಿ

ರವಿವಾರ ಲಾಕ್ ಡೌನ್: ಪುತ್ತೂರು ಸಂಪೂರ್ಣ ಬಂದ್

ವಾರ್ತಾ ಭಾರತಿ : 12 Jul, 2020

ಪುತ್ತೂರು: ರವಿವಾರ ಲಾಕ್ ಡೌನ್ ಪುತ್ತೂರು ತಾಲೂಕಿನ ‌ನಗರ ಮತ್ತು ‌ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಪುತ್ತೂರು ‌ನಗರದಲ್ಲಿ ಯಾವುದೇ ವಾಹನ ‌ಮತ್ತು‌ ಜನಸಂಚಾರ ಇರಲಿಲ್ಲ. ರಸ್ತೆಗಳು ಬಿಕೋ ಅನ್ನುತ್ತಿತ್ತು. 

ಕೆಎಸ್ಆರ್ಟಿಸಿ , ಖಾಸಗಿ ಬಸ್ಸುಗಳ ಓಡಾಟ ಸೇರಿದಂತೆ ಕಾರು, ಲಾರಿ, ಅಟೋರಿಕ್ಷಾ,ದ್ವಿಚಕ್ರ ವಾಹನಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ಮೆಡಿಕಲ್ ಶಾಪ್, ಹಾಲಿನ ಸ್ಟಾಲ್, ಪತ್ರಿಕಾ ಅಂಗಡಿ ಬೆಳಗ್ಗಿನ ವೇಳೆಯಲ್ಲಿ ತೆರೆದಿದ್ದವು. ಮಧ್ಯಾಹ್ನದ ಬಳಿಕ ಅವುಗಳನ್ನು ‌ಮುಚ್ಚಲಾಗಿತ್ತು.

ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಸಂಪೂರ್ಣವಾಗಿ ಬಂದ್ ಆಗಿತ್ತು. ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)