varthabharthi


ಕರ್ನಾಟಕ

ಅಕ್ರಮ ಮದ್ಯ ಸಾಗಾಟ: ಓರ್ವನ ಬಂಧನ, 6.22 ಲಕ್ಷ ರೂ.ಮೌಲ್ಯದ ಮದ್ಯ ಜಪ್ತಿ

ವಾರ್ತಾ ಭಾರತಿ : 12 Jul, 2020

ಸಾಂದರ್ಭಿಕ ಚಿತ್ರ

ಬೆಳಗಾವಿ, ಜು.12: ಲಾಕ್‍ಡೌನ್ ಜಾರಿ ಹಿನ್ನೆಲೆ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಪ್ರಕರಣವನ್ನು ಬೇಧಿಸಿರುವ ಯಮಕನಮರಡಿ ಠಾಣಾ ಪೊಲೀಸರು, ಓರ್ವನನ್ನು ಬಂಧಿಸಿ ಸುಮಾರು 6.22 ಲಕ್ಷ ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.

ಇಲ್ಲಿನ ಹೊನಗಾ ಗ್ರಾಮದ ಜನತಾ ಫ್ಲಾಟ್‍ನ ನಿವಾಸಿ ಖಾಸೀಂ ಸಾಬ್(34) ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಗೋವಾದಿಂದ ನಿಪ್ಪಾಣಿ ಕಡೆಗೆ ಲಾರಿಯಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು 173 ಪೆಟ್ಟಿಗೆಯಲ್ಲಿ ತುಂಬಿದ್ದ ಮದ್ಯ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)