varthabharthi


ಸಿನಿಮಾ

ಇನ್ ಸ್ಟಾಗ್ರಾಂನಲ್ಲಿ ಕೊನೆಯ ಭಾವನಾತ್ಮಕ ಪೋಸ್ಟ್

ನಟಿ, ರೂಪದರ್ಶಿ ದಿವ್ಯಾ ಚೌಸ್ಕಿ ಮೃತ್ಯು

ವಾರ್ತಾ ಭಾರತಿ : 13 Jul, 2020

ಹೊಸದಿಲ್ಲಿ: ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ, ರೂಪದರ್ಶಿ ದಿವ್ಯಾ ಚೌಸ್ಕೆ ಇಂದು ಕೊನೆಯುಸಿರೆಳೆದಿದ್ದಾರೆ.

“ದಿವ್ಯಾ ಚೌಸ್ಕಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲು ತೀವ್ರ ನೋವಾಗುತ್ತಿದೆ. ಇಂದು ಆಕೆ ನಮ್ಮನ್ನು ಅಗಲಿದ್ದಾಳೆ. ದೇವರು ಆಕೆಯ ಆತ್ಮವನ್ನು ಆಶೀರ್ವದಿಸಲಿ” ಎಂದು ಆಕೆಯ ಸಂಬಂಧಿ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಶನಿವಾರ ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದ ದಿವ್ಯಾ ಚೌಸ್ಕೀ, “ನಾವು ಏನನ್ನು ಹೇಳಲು ಬಯಸುತ್ತಿದ್ದೇನೋ ಅದಕ್ಕೆ ಪದಗಳೇ ಸಾಲುತ್ತಿಲ್ಲ, ತಿಂಗಳುಗಳಿಂದ ನಾನು ಕಾಣಿಸಿಕೊಂಡಿರಲಿಲ್ಲ. ಇದೀಗ ನಾನು ಹೇಳುವ ಸಮಯ ಬಂದಿದ್ದೇನೆ. ನಾನು ಮರಣವನ್ನು ಎದುರು ನೋಡುತ್ತಿದ್ದೇನೆ. ನಾನು ಧೈರ್ಯದಿಂದಿದ್ದೇನೆ. ಸಂಕಷ್ಟಗಳಿಲ್ಲದ ಇನ್ನೊಂದು ಜೀವನ ಅಲ್ಲಿರಲಿ, ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ನೀವು ನನಗೆ ಎಷ್ಟು ಬೇಕಾದವರು ಎನ್ನುವುದು ದೇವರಿಗೆ ಮಾತ್ರ ಗೊತ್ತು. ಬೈ” ಎಂದಿದ್ದರು. ಈ ಪೋಸ್ಟ್ ಹಾಕಿದ ಮರುದಿನ ಅವರು ಮೃತಪಟ್ಟಿದ್ದಾರೆ.

ಮತ್ತೊಂದು ಪೋಸ್ಟ್ ಮಾಡಿದ್ದ ಅವರು, “ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾತನಾಡಲೂ ನನಗೆ ಸಾಧ್ಯವಾಗುತ್ತಿಲ್ಲ. ಕ್ಯಾನ್ಸರ್ ನನ್ನನ್ನು ಕೊಲ್ಲುತ್ತಿದೆ. ನಾನು ಸಲೀಸಾಗಿ ಕೊನೆಯುಸಿರೆಳೆಯಲು ಪ್ರಾರ್ಥಿಸಿ” ಎಂದು ಹೇಳಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)