varthabharthi


ಕರಾವಳಿ

ಬ್ರಹ್ಮಾವರ: ಪ್ರತ್ಯೇಕ ಪ್ರಕರಣಗಳಲ್ಲಿ ತಂದೆ-ಮಗಳು, ತಾಯಿ-ಮಗಳು ಕೊರೋನ ಪಾಸಿಟಿವ್

ವಾರ್ತಾ ಭಾರತಿ : 13 Jul, 2020

ಉಡುಪಿ, ಜು.13: ಬ್ರಹ್ಮಾವರ ತಾಲೂಕಿನಲ್ಲಿ ಇಂದು ಒಟ್ಟು ಆರು ಮಂದಿಯಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಕಂಡುಬಂದಿದೆ. ಇವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಅವರ ನಾಲ್ಕು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

 ಇಂದು ಪಾಸಿಟಿವ್ ಬಂದವರಲ್ಲಿ ಉಪ್ಪೂರಿನ ತಂದೆ-ಮಗಳು ಹಾಗೂ ಹಾವಂಜೆಯ ತಾಯಿ-ಮಗಳು ಸೇರಿದ್ದಾರೆ. ಈ ಎರಡು ಮನೆಗಳನ್ನು ಸಹ ಸೀಲ್‌ಡೌನ್ ಮಾಡಲಾಗಿದೆ. ಅದೇ ರೀತಿ ಚಿತ್ರಪಾಡಿ ಕಾರ್ತೆಟ್ಟುವಿನ ಪ್ರಾಂಶುಪಾಲರೊಬ್ಬರಲ್ಲೂ ಕೊರೋನ ಸೋಂಕು ಪತ್ತೆಯಾಗಿದ್ದು ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಿ ಅವರ ಕಾರ್ತಟ್ಟು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಕುರಾಡಿಯ ಮಹಿಳೆಯೊಬ್ಬರಲ್ಲೂ ಇಂದು ಪಾಸಿಟಿವ್ ಕಂಡುಬಂದಿದೆ. ಇವರ ಪತಿ ಈ ಮೊದಲೇ ಸೋಂಕು ಬಾಧಿತರಾಗಿರುವುದರಿಂದ ಮನೆಯನ್ನು ಈಗಾಗಲೇ ಸೀಲ್‌ಡೌನ್ ಮಾಡಲಾಗಿತ್ತು. ಇದೀಗ ಪತ್ನಿಯಲ್ಲೂ ಸೋಂಕು ಪತ್ತೆಯಾಗಿದೆ.

ಕುಂದಾಪುರ ತಾಲೂಕಿನಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳಲ್ಲಿ ಮಾತ್ರವಲ್ಲದೇ ಕೋಟೇಶ್ವರದ ಮೂವರಲ್ಲೂ ಪಾಸಿಟಿಟ್ ಕಂಡುಬಂದಿದೆ. ಈ ಹಿಂದೆ ಪಾಸಿಟಿವ್ ಬಂದವರ ಸಂಪರ್ಕದಿಂದ ಇವರಿಗೂ ಸೋಂಕು ತಗಲಿದೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)