varthabharthi


ಕ್ರೀಡೆ

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಗಂಡುಮಗು

ವಾರ್ತಾ ಭಾರತಿ : 30 Jul, 2020

ಹೊಸದಿಲ್ಲಿ, ಜು.30: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನಟಾಸಾ ಸ್ಟಾಂಕೊವಿಕ್ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು 26ರ ಹರೆಯದ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.

"ನಮಗೆ ಗಂಡುಮಗು ಜನಿಸಿದೆ'' ಎಂದು ಮಗುವಿನ ಚಿತ್ರದೊಂದಿಗೆ ಪಾಂಡೆ ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ವಡೋದರದಲ್ಲಿ ನಟಾಸಾ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಇಬ್ಬರು ಮೇ ತಿಂಗಳಲ್ಲೇ ನಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರಲಿದ್ದಾನೆ ಎಂದು ಘೋಷಿಸಿದ್ದರು. ಈ ವರ್ಷಾರಂಭದಲ್ಲಿ ಹಾರ್ದಿಕ್ ಪಾಂಡ್ಯ ಅವರು ನಟಾಸಾ ಅವರೊಂದಿಗೆ ಮದುವೆ ನಿಶ್ಚಿತಾರ್ಥವಾಗಿರುವ ವಿಚಾರವನ್ನು ಘೋಷಿಸಿದ್ದರು. ಜನವರಿ 1ರಂದು ನಟಾಸಾಗೆ ಮದುವೆಯ ಪ್ರಸ್ತಾವ ಮಾಡುವ ಚಿತ್ರವನ್ನು ಹಂಚಿಕೊಂಡಿದ್ದ ಹಾರ್ದಿಕ್ ಪಾಂಡ್ಯ, 'ಮೇ ತೇರಾ, ತೂ ಮೇರಿ ಜಾನ್, ಸಾರಾ ಹಿಂದೂಸ್ತಾನ್' ಎಂದು ಬರೆದಿದ್ದರು.

ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯಗೆ ಶುಭಾಶಯ ಕೋರಿದ ಮೊದಲ ಕ್ರಿಕೆಟಿಗನಾಗಿದ್ದರು. ಆ ನಂತರ ಉಳಿದ ಸಹ ಆಟಗಾರರಲ್ಲದೆ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)