varthabharthi


ಅಂತಾರಾಷ್ಟ್ರೀಯ

ಅಲಾಸ್ಕಾ: ಎರಡು ವಿಮಾನಗಳ ಢಿಕ್ಕಿ; ಸಂಸದ ಸಹಿತ 7 ಮಂದಿ ಮೃತ್ಯು

ವಾರ್ತಾ ಭಾರತಿ : 1 Aug, 2020

ಅಂಕಾರೇಜ್,ಆ.1: ಇಲ್ಲಿ ಶುಕ್ರವಾರ ಮಿಡೈರ್ ವಿಮಾನಗಳು ಢಿಕ್ಕಿಯಾದ ಪರಿಣಾಮ ಓರ್ವ ಸಂಸದ ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಮೃತಪಟ್ಟಿರುವ ಸಂಸದ ಒಂದು ವಿಮಾನವನ್ನು ಚಲಾಯಿಸುತ್ತಿದ್ದರು ಎಂದು ಅಲಾಸ್ಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಸೋಲ್ಡೊಟ್ನಾದ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ವಿಮಾನಗಳ ಢಿಕ್ಕಿಯ ಬಳಿಕ ಯಾರೊಬ್ಬರು ಬದುಕುಳಿದಿಲ್ಲ ಎಂದು ಅಲಾಸ್ಕಾ ರಾಜ್ಯದ ಟ್ರೂಪರ್ಸ್‍ಗಳು ತಿಳಿಸಿದ್ದಾರೆ.
ಅಲಾಸ್ಕಾ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ಸಂಸದ ಗ್ಯಾರಿ ಕ್ನೋಪ್ ವಿಮಾನದಲ್ಲಿ ಒಬ್ಬರೇ ಇದ್ದರು.ಮತ್ತೊಂದು ವಿಮಾನದಲ್ಲಿ ದಕ್ಷಿಣ ಕರೊಲಿನದ ನಾಲ್ವರು ಪ್ರವಾಸಿಗರು, ಓರ್ವ ಗೈಡ್ ಹಾಗೂ ಪೈಲಟ್ ಇದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)