varthabharthi


ರಾಷ್ಟ್ರೀಯ

ಆತ್ಮಹತ್ಯೆ ಪ್ರಕರಣದತ್ತ ತಕ್ಷಣ ಗಮನಹರಿಸಿ: ಪ್ರಧಾನಿಗೆ ಸುಶಾಂತ್ ಸಿಂಗ್ ತಂಗಿಯ ಮನವಿ

ವಾರ್ತಾ ಭಾರತಿ : 1 Aug, 2020

ಹೊಸದಿಲ್ಲಿ,ಆ.1: ಕುಟುಂಬಕ್ಕೆ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನೀವು ತಕ್ಷಣವೇ ಈ ಪ್ರಕರಣದತ್ತ ಗಮನ ನೀಡಬೇಕೆಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.

ನಟ ಸುಶಾಂತ್ ಜೂನ್ 14ರಂದು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ಕುರಿತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಾರಾರಂಭದಲ್ಲಿ ಸುಶಾಂತ್ ಅವರ ತಂದೆ ಕೆಕೆ ಸಿಂಗ್ ಅವರು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ವಂಚನೆ,ಕಿರುಕುಳ ಆರೋಪ ಹೊರಿಸಿ ಪಾಟ್ನಾ ದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ರಿಯಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

"ನಾನು ಸುಶಾಂತ್ ಸಿಂಗ್ ರಾಜ್‌ಪೂತ್ ಸಹೋದರಿ ಹಾಗೂ ಇಡೀ ಪ್ರಕರಣದ ಬಗ್ಗೆ ತುರ್ತಾಗಿ ಪರಾಮರ್ಶಿಸಬೇಕಾದ ಅಗತ್ಯವಿದೆ ಎಂದು ನಿಮಗೆ ವಿನಂತಿಸುವೆ. ನಮಗೆ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ಯಾವುದೇ ಬೆಲೆ ತೆತ್ತಾದರೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಜಸ್ಟಿಸ್ ಫಾರ್ ಸುಶಾಂತ್, ಸತ್ಯಮೇವ ಜಯತೇ'' ಎಂದು ಪ್ರಧಾನಿ ಮೋದಿಗೆ ಬರೆದ ಪತ್ರವನ್ನು ಶ್ವೇತಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)