varthabharthi


ಕರಾವಳಿ

ಮುಖ್ಯಮಂತ್ರಿ ಬಿಎಸ್ ವೈ ಪುತ್ರಿಗೂ ಕೊರೋನ ಸೋಂಕು ದೃಢ

ವಾರ್ತಾ ಭಾರತಿ : 3 Aug, 2020

ಬೆಂಗಳೂರು, ಆ. 3 : ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೂಡ ಪರೀಕ್ಷೆಗೆ ಒಳಗಾಗಿದ್ದು, ಬಿಎಸ್ ವೈ ಅವರ ಎರಡನೆ ಪುತ್ರಿಗೆ ಕೊರೋನ ಪಾಸಿಟಿವ್ ಬಂದಿದೆ.

 ಯಡಿಯೂರಪ್ಪರ ಎರಡನೆ ಪುತ್ರಿ ಪದ್ಮಾವತಿ ಅವರಿಗೂ ಕೊರೊನ ಪಾಸಿಟಿವ್ ಬಂದಿದೆ. ಆದರೆ, ಪುತ್ರ ವಿಜಯೇಂದ್ರ ಅವರ ವರದಿಯಲ್ಲಿ ಕೊರೋನ ನೆಗೆಟಿವ್​ ಬಂದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ನಮ್ಮ ತಂದೆ ಯಡಿಯೂರಪ್ಪನವರು‌ ಚೆನ್ನಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ. ನನ್ನ ಕೊರೋನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು  ವಿಜಯೇಂದ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ..

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪ್ರತಿನಿತ್ಯದ ಊಟೋಪಚಾರ ನೋಡಿಕೊಳ್ಳುತ್ತಿದ್ದ ಪುತ್ರಿ ಪದ್ಮಾವತಿಗೆ ಕೊರೋನ ಪಾಸಿಟಿವ್ ವರದಿ ಬಂದ ಬೆನ್ನಲ್ಲೇ ಹೋಮ್ ಕ್ವಾರಂಟೀನ್​ಗೆ ಒಳಗಾಗಿದ್ದಾರೆ. ಯಡಿಯೂರಪ್ಪ ಅವರ ಮೊಮ್ಮಕ್ಕಳು ಸಹಿತ ಕುಟುಂಬದ ಸದಸ್ಯರು ಕೊರೋನ ಪರೀಕ್ಷೆಗೆ ಒಳಗಾಗಿದ್ದು ವರದಿ ನಿರೀಕ್ಷೆಯಲ್ಲಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)