varthabharthi


ರಾಷ್ಟ್ರೀಯ

ಸಹೋದರಿ ಪ್ರಿಯಾಂಕಾಗೆ ರಕ್ಷಾ ಬಂಧನದ ಶುಭ ಕೋರಿದ ರಾಹುಲ್ ಗಾಂಧಿ

ವಾರ್ತಾ ಭಾರತಿ : 3 Aug, 2020

ಹೊಸದಿಲ್ಲಿ, ಆ.3: ಸಹೋದರಿ ಪ್ರಿಯಾಂಕಾ ಗಾಂಧಿಗೆ ಸೋಮವಾರ ರಕ್ಷಾ ಬಂಧನದ ಶುಭ ಹಾರೈಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹೋದರಿಯನ್ನು ಆಲಿಂಗಿಸಿಕೊಂಡಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಫೋಟೊಕ್ಕೆ ಕ್ಯಾಪ್ಶನ್ ಬರೆದಿರುವ ರಾಹುಲ್, ರಾಖಿಯ ಶುಭ ಹಾರೈಸಿದರು. “ಪ್ರತಿಯೊಬ್ಬರಿಗೂ ರಕ್ಷಾಬಂಧನದ ಶುಭಾಶಯಗಳು’’ ಎಂದು ಕೇರಳದ ವಯನಾಡ್ ಸಂಸದ ರಾಹುಲ್ ಟ್ವೀಟಿಸಿದ್ದಾರೆ.

ಕೇವಲ 40 ನಿಮಿಷಗಳಲ್ಲಿ 18,000ಕ್ಕೂ ಅಧಿಕ ಫಾಲೋವರ್ಸ್‌ಗಳು ಇದನ್ನು ಲೈಕ್ ಮಾಡಿದ್ದಾರೆ.

48ರ ಹರೆಯದ ಪ್ರಿಯಾಂಕಾ ಕೂಡ ಸಹೋದರ ರಾಹುಲ್‌ಗೆ ಫೋಟೊ ಸಮೇತ ಶುಭ ಹಾರೈಸಿದರು.

“ಸಹೋದರನೊಂದಿಗೆ ಸಂತೋಷ ಹಾಗೂ ದುಃಖದೊಂದಿಗೆ ಜೀವನ ಸಾಗಿಸುತ್ತಿರುವಾಗ ನಾನು ಪ್ರೀತಿ, ಸತ್ಯ ಹಾಗೂ ತಾಳ್ಮೆಯನ್ನು ಸಹೋದರನಿಂದ ಕಲಿತಿದ್ದೇನೆ. ಇಂತಹ ಸಹೋದರನನ್ನು ಹೊಂದಿರುವುದು ನನ್ನ ಹೆಮ್ಮೆ’’ ಎಂದು ಹಿಂದಿಯಲ್ಲಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ರಕ್ಷಾಬಂಧನದ ಶುಭ ಹಾರೈಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)