varthabharthi


ಕ್ರೀಡೆ

ಮಹಿಳಾ ವಿಶ್ವ ಟೀಮ್ ಸ್ಕ್ವಾಷ್ ಚಾಂಪಿಯನ್‌ಶಿಪ್: ಹಿಂದೆ ಸರಿದ ಭಾರತ

ವಾರ್ತಾ ಭಾರತಿ : 4 Aug, 2020

ಚೆನ್ನೈ, ಆ.3: ಮಲೇಶ್ಯಾದ ಕೌಲಾಲಂಪುರದಲ್ಲಿ ಡಿಸೆಂಬರ್ 15ರಿಂದ 20ರ ತನಕ ನಿಗದಿಯಾಗಿರುವ ಮಹಿಳಾ ವಿಶ್ವ ಟೀಮ್ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಿಂದ ಭಾರತ ತಂಡ ಹಿಂದೆ ಸರಿದಿದೆ. ಆಟಗಾರರ ತಯಾರಿ, ಸಮಯ ಹಾಗೂ ಪಂದ್ಯ ಸಿದ್ಧತೆಯ ಕೊರತೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಭಾರತ ಹೇಳಿದೆ.

ಟೂರ್ನಿಯಿಂದ ಹಿಂದೆ ಸರಿಯುವ ಮೊದಲು ಅಗ್ರ ಆಟಗಾರರು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಭಾರತದ ಸ್ಕ್ವಾಷ್ ರಾಕೆಟ್ಸ್ ಫೆಡರೇಶನ್‌ನ ಕಾರ್ಯದರ್ಶಿ ಸೈರಸ್ ಪೊಂಚಾ ತಿಳಿಸಿದ್ದಾರೆ.

‘‘ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಟೂರ್ನಮೆಂಟ್‌ಗಳಿಗಾಗಿ(ಯುವಜನ ವ್ಯವಹಾರ, ಕ್ರೀಡೆ, ಭಾರತ ಕ್ರೀಡಾ ಪ್ರಾಧಿಕಾರದಿಂದ ಇನ್ನಷ್ಟೇ ಅನುಮತಿ ಪಡೆಯಬೇಕಾಗಿದೆ) ನಮ್ಮ ಅಥ್ಲೀಟ್‌ಗಳು ಹಾಗೂ ಸಿಬ್ಬಂದಿಗೆ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದ ಮಾರ್ಗಸೂಚಿಯ ಕುರಿತು ಅನಿಶ್ಚಿತತೆ, ಕ್ರೀಡಾಳುಗಳ ತಯಾರಿ, ಸಮಯ ಹಾಗೂ ಪಂದ್ಯ ಸಿದ್ಧತೆಯ ಕೊರತೆಯಿಂದಾಗಿ ನಮ್ಮ ಅಗ್ರ ಆಟಗಾರರನ್ನು ಸಂಪರ್ಕಿಸಿದ ಬಳಿಕ ಸ್ಕ್ವಾಷ್ ಒಕ್ಕೂಟವು ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ’’ ಎಂದು ಸೈರಸ್ ಪೊಂಚಾ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)