varthabharthi


ಕ್ರೀಡೆ

ಇಂಗ್ಲೆಂಡ್‌ ಬ್ಯಾಟಿಂಗ್ ಕೋಚ್ ಆಗಿ ಟ್ರಾಟ್ ನೇಮಕ

ವಾರ್ತಾ ಭಾರತಿ : 4 Aug, 2020

ಲಂಡನ್, ಆ.3: ಪಾಕಿಸ್ತಾನ ವಿರುದ್ಧ ಬುಧವಾರದಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಮಾಜಿ ಬ್ಯಾಟ್ಸ್‌ಮನ್ ಜೊನಾಥನ್ ಟ್ರಾಟ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

39ರ ಹರೆಯದ ಟ್ರಾಟ್ 2009ರಿಂದ 2015ರ ತನಕ ಇಂಗ್ಲೆಂಡ್‌ನ ಪರ 52 ಟೆಸ್ಟ್ ಪಂದ್ಯಗಳಲ್ಲಿ 3,835 ರನ್ ಗಳಿಸಿದ್ದಾರೆ. ಇವರೊಂದಿಗೆ ನ್ಯೂಝಿಲ್ಯಾಂಡ್‌ನ ಸ್ಪಿನ್ನರ್ ಜೀತನ್ ಪಟೇಲ್ ಹಾಗೂ ವಾರ್ವಿಕ್‌ಶೈರ್ ತಂಡದ ವೇಗದ ಬೌಲರ್ ಗ್ರೇಮ್ ವೆಲ್ಚ್ ಸೇರಿಕೊಳ್ಳಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 18,662 ರನ್ ಗಳಿಸಿದ್ದ ಟ್ರಾಟ್ 68 ಏಕದಿನ ಹಾಗೂ 7 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ನಲ್ಲಿ ಬುಧವಾರದಿಂದ ಆರಂಭವಾಗಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಸೆಣಸಾಡಲಿವೆ. ಸೌತಾಂಪ್ಟನ್‌ನ ಅಗಾಸ್ ಬೌಲ್‌ನಲ್ಲಿ ಉಳಿದೆರಡು ಪಂದ್ಯಗಳು ನಡೆಯುತ್ತವೆ.

ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪುನರಾರಂಭಕ್ಕೆ ಸಾಕ್ಷಿಯಾಗಿದ್ದ ಇತ್ತೀಚೆಗೆ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-1 ಅಂತರದಿಂದ ಗೆದ್ದುಕೊಂಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)