varthabharthi


ರಾಷ್ಟ್ರೀಯ

ರಾಮಮಂದಿರ ಭೂಮಿ ಪೂಜೆ ರಾಷ್ಟ್ರೀಯ ಏಕತೆಯ ಸಂಕೇತವಾಗಲಿ: ಪ್ರಿಯಾಂಕಾ ಗಾಂಧಿ

ವಾರ್ತಾ ಭಾರತಿ : 4 Aug, 2020

ಹೊಸದಿಲ್ಲಿ: ‘ಶ್ರೀ ರಾಮ ಎಲ್ಲರ ಜತೆಗಿದ್ದಾನೆ’ ಎಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುವ ಮುನ್ನಾ ದಿನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ. ನಾಳಿನ ಸಮಾರಂಭ ರಾಷ್ಟ್ರೀಯ ಏಕತೆ, ಭ್ರಾತೃತ್ವ ಹಾಗೂ ಸಾಂಸ್ಕೃತಿಕ ಸಮ್ಮಿಳಿತದ ಸಂಕೇತವಾಗುವುದು ಎಂದು ಆಶಿಸಿದ್ದಾರೆ.

“ಸರಳತೆ, ದಿಟ್ಟತೆ, ತಾಳ್ಮೆ, ಬಲಿದಾನ ಹಾಗೂ ಬದ್ಧತೆ ಇವುಗಳು ದೀನಬಂಧು ರಾಮ ಹೆಸರಿನ ಜೀವಾಳವಾಗಿವೆ. ಶ್ರೀ ರಾಮ ಎಲ್ಲರ ಜತೆಗಿದ್ದಾನೆ. ಶ್ರೀ ರಾಮ ಎಲ್ಲರ ಜತೆಗಿದ್ದಾನೆ'' ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಿಯಾಂಕ ಬರೆದಿದ್ದಾರೆ.

“ಶ್ರೀ ರಾಮ ಹಾಗೂ ಸೀತಾ ಮಾತೆಯ ಅನುಗ್ರಹದಿಂದ ರಾಮಲಲ್ಲಾನ ದೇಗುಲದ ಭೂಮಿ ಪೂಜೆ ಸಮಾರಂಭ ರಾಷ್ಟ್ರೀಯ ಏಕತೆ, ಭ್ರಾತೃತ್ವ ಹಾಗೂ ಸಾಂಸ್ಕೃತಿಕ ಸಮ್ಮಿಳಿತದ  ಸಂದರ್ಭವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)