varthabharthi


ರಾಷ್ಟ್ರೀಯ

ಯುಪಿಎಸ್ಸಿ ಫಲಿತಾಂಶ: ರಾಹುಲ್ ಮೋದಿಗೆ 420ನೆ ರ‌್ಯಾಂಕ್ !

ವಾರ್ತಾ ಭಾರತಿ : 4 Aug, 2020

ಹೊಸದಿಲ್ಲಿ: 2019ರ ಯುಪಿಎಸ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪ್ರದೀಪ್ ಸಿಂಗ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಈ ನಡುವೆ ಫಲಿತಾಂಶ ಪಟ್ಟಿಯಲ್ಲಿರುವ ಅಭ್ಯರ್ಥಿಯೊಬ್ಬರ ಹೆಸರು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ರಾಹುಲ್ ಮೋದಿ ಎನ್ನುವ ಹೆಸರಿನ ಅಭ್ಯರ್ಥಿಯೊಬ್ಬರು 420ನೆ ರ್ಯಾಂಕ್ ಗಳಿಸಿದ್ದಾರೆ.

6312980  ರೋಲ್ ನಂಬರ್ ನಲ್ಲಿರುವ ಅಭ್ಯರ್ಥಿಯ ಹೆಸರು ದೇಶದ ಎರಡು ಅತಿ ದೊಡ್ಡ ರಾಜಕೀಯ ಪಕ್ಷಗಳ ಪ್ರಮುಖ ನಾಯಕರದ್ದಾಗಿದೆ. ರಾಹುಲ್ ಮೋದಿ ಎನ್ನುವ ಹೆಸರು ಹಲವರ ಗಮನ ಸೆಳೆದಿದ್ದು, ಇದರ ಫೋಟೊ ವೈರಲ್ ಆಗುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)