varthabharthi


ರಾಷ್ಟ್ರೀಯ

ರಾಮಮಂದಿರ ನಿರ್ಮಾಣ: ಮಧ್ಯಪ್ರದೇಶ ಕಾಂಗ್ರೆಸ್‌ನಿಂದ ಬೆಳ್ಳಿ ಇಟ್ಟಿಗೆ

ವಾರ್ತಾ ಭಾರತಿ : 4 Aug, 2020

ಭೋಪಾಲ, ಆ.4: ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಬಳಸಲು ಮಧ್ಯಪ್ರದೇಶ ಕಾಂಗ್ರೆಸ್ ಘಟಕದಿಂದ 11 ಬೆಳ್ಳಿಯ ಇಟ್ಟಿಗೆಗಳನ್ನು ನೀಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ಹೇಳಿದ್ದಾರೆ.

ಇತರ ಪಕ್ಷಗಳ ಮುಖಂಡರೊಂದಿಗೆ ಭೋಪಾಲದ ತಮ್ಮ ನಿವಾಸದಲ್ಲಿ ಸೋಮವಾರ ಹನುಮಾನ್ ಚಾಲೀಸಾ ಪಠಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಮಲನಾಥ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದನ್ನು ತಾವು ಸ್ವಾಗತಿಸುವುದಾಗಿ ಹೇಳಿದರು.

ಆದರೆ, ರಾಮಮಂದಿರ ನಿರ್ಮಾಣ ಕಾರ್ಯಕ್ಕೆ 1989ರಲ್ಲಿ ಶಿಲಾನ್ಯಾಸ ನಡೆಯಲು ಮುಖ್ಯ ಕಾರಣಕರ್ತರು ಮಾಜಿ ಪ್ರಧಾನಿ ರಾಜೀವ್ ‌ಗಾಂಧಿ ಅವರು 1985ರಲ್ಲಿ ಈ ಕಾರ್ಯಕ್ಕೆ ಆರಂಭ ನೀಡಿದ್ದರು. ಈಗ ರಾಜೀವ್ ‌ಗಾಂಧಿ ನಮ್ಮೊಂದಿಗಿದ್ದರೆ ಅವರೂ ಬುಧವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ನಾವು ಮಧ್ಯಪ್ರದೇಶದ ಜನತೆಯ ಪರವಾಗಿ 11 ಬೆಳ್ಳಿಯ ಇಟ್ಟಿಗೆಗಳನ್ನು ರವಾನಿಸುತ್ತಿದ್ದೇವೆ ಎಂದು ಕಮಲನಾಥ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)