varthabharthi


ರಾಷ್ಟ್ರೀಯ

ರಾಹುಲ್ ಟ್ವೀಟ್

‘ರಾಮನೆಂದರೆ ಪ್ರೀತಿ, ರಾಮನೆಂದರೆ ಅನುಕಂಪ, ರಾಮನೆಂದರೆ ನ್ಯಾಯ'

ವಾರ್ತಾ ಭಾರತಿ : 5 Aug, 2020

ಹೊಸದಿಲ್ಲಿ: ಮನುಷ್ಯರಲ್ಲಿರಬೇಕಾದ ಅತ್ಯುತ್ತಮ ಗುಣಗಳ ಪ್ರತಿಬಿಂಬವೇ ಶ್ರೀ ರಾಮನಾಗಿದ್ದಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ಭೂಮಿ ಪೂಜೆಯಲ್ಲಿ  ಭಾಗವಹಿಸುತ್ತಿರುವಂತೆಯೇ ರಾಹುಲ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.

“ಶ್ರೀ ರಾಮ ಮನುಷ್ಯರಲ್ಲಿರಬೇಕಾದ ಅತ್ಯುತ್ತಮ ಗುಣಗಳ ಪ್ರತಿಬಿಂಬ. ಅವು ನಮ್ಮ ಮನಸ್ಸಿನಾಳದಲ್ಲಿರುವ ಮಾನವತೆಯ ಜೀವಾಳವಾಗಿವೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

“ಶ್ರೀ ರಾಮನೆಂದರೆ ಪ್ರೀತಿ, ಅದು ಅಸಹನೆಯಲ್ಲಿ ಯಾವತ್ತೂ ಕಾಣದು, ರಾಮನೆಂದರೆ ಅನುಕಂಪ, ಅದು ಯಾವತ್ತೂ ಕ್ರೂರತೆಯಲ್ಲಿ ಪ್ರಕಟವಾಗದು, ರಾಮನೆಂದರೆ ನ್ಯಾಯ, ಅದು ಯಾವತ್ತೂ ಅನ್ಯಾಯದಲ್ಲಿ ಕಾಣಿಸದು'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)